ಡಿವೈಎಸ್ಪಿ ಗಣಪತಿ 
ರಾಜ್ಯ

ಕಿರುಕುಳ ಆರೋಪ ತಳ್ಳಿ ಹಾಕಿದ ಪ್ರಣಬ್ ಮೊಹಾಂತಿ ಆಪ್ತರು

ನೀಡುತ್ತಿದ್ದರು ಎಂಬ ಡಿವೈಎಸ್ಪಿ ಗಣಪತಿಯವರ ಆರೋಪವನ್ನು ಐಜಿಪಿ ಪ್ರಣಬ್ ಮೊಹಾಂತಿಯವರ ಆಪ್ತರು ಶುಕ್ರವಾರ ತಿರಸ್ಕರಿಸಿದ್ದಾರೆ...

ಬೆಂಗಳೂರು: ಕಿರುಕುಳ ನೀಡುತ್ತಿದ್ದರು ಎಂಬ ಡಿವೈಎಸ್ಪಿ ಗಣಪತಿಯವರ ಆರೋಪವನ್ನು ಐಜಿಪಿ ಪ್ರಣಬ್ ಮೊಹಾಂತಿಯವರ ಆಪ್ತರು ಶುಕ್ರವಾರ ತಿರಸ್ಕರಿಸಿದ್ದಾರೆ.

ಮೊಹಾಂತಿ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಗಣಪತಿಯವರು ನನ್ನ ಅಡಿಯಲ್ಲಿ ಅಥವಾ ನನ್ನ ಜೊತೆಗೆ ಕೆಲಸ ಮಾಡುತ್ತಿರಲಿಲ್ಲ. ಅವರ ವಿರುದ್ಧ ಸಲ್ಲಿಸಲಾಗಿದ್ದ ವರದಿಯಿಂದಾಗಿ ಅವರನ್ನು ಅಮಾನತು ಮಾಡಲಾಗಿತ್ತು.

ಮೊಹಾಂತಿಯವರು (ಅಪರಾಧ) ಹೆಚ್ಚುವರಿ ಆಯುಕ್ತರಾಗಿದ್ದ ಸಂದರ್ಭದಲ್ಲಿ ಗಣಪತಿಯವರು ರಾಜಗೊಪಾಲನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2011 ರಲ್ಲಿ ಜಂಟಿ ಆಯುಕ್ತರಾಗಿ (ಪಶ್ಚಿಮ ವಿಭಾಗ) ಅಧಿಕಾರಕ್ಕೆ ಬಂದಾಗ ಗಣಪತಿಯವರು ಮಡಿವಾಳ (ಆಗ್ನೇಯ) ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಇದನ್ನು ಗಮನಿಸಿದರೆ, ಮೊಹಾಂತಿ ಗಣಪತಿಯವರಿಗೆ ಕಿರುಕುಳ ನೀಡುತ್ತಿದ್ದರು ಎಂಬ ಪ್ರಶ್ನೆಯೇ ಬರುವುದಿಲ್ಲ. ಮೊಹಾಂತಿ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು. ಆರೋಪಗಳಿಗೆ ಒಂದಕ್ಕೊಂದು ಸಂಬಂಧವೇ ಇಲ್ಲ. ಆರೋಪ ಸಂಬಂಧ ಸಾಕ್ಷಿಗಳೇನಾದರೂ ಇದ್ದರೆ ತೋರಿಸಲಿ ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT