ಮಂಗಳೂರು: ದಕ್ಷಿಣ ಜಿಲ್ಲೆಯ ಸುಂದರ ನಾಡು ಮಂಗಳೂರಿನಲ್ಲಿ ಹಿಂದೂ-ಮುಸ್ಲಿಂರ ಭಾವೈಕ್ಯ ಬೆಸೆಯುವ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಜನರಲ್ಲಿರುವ ಭಕ್ತಿಯ ಪರಾಕಾಷ್ಟೆ ಎಲ್ಲರ ಗಮನವನ್ನು ಸೆಳೆಯುತ್ತಿದೆ.
ಕುಂಬಳೆಯ ಅರಿಕ್ಕಾಡಿನಲ್ಲಿನ ಭಗವತಿ ಅಲಿ ಚಾಮುಂಡಿ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಧಾರ್ಮಿಕ ನಂಬಿಕೆ ಹಾಗೂ ಪ್ರಸಿದ್ಧಿ ಪಡೆದಿರುವ ಭೂತಾರಾಧನೆಯನ್ನು ನಡೆಸಲಾಗುತ್ತಿದೆ.
ಮಹೋತ್ಸವದಲ್ಲಿ ಅಲಿ ಭೂತ ಮತ್ತು ಚಾಮುಂಡಿ ಭೂತ ಎಂಬ ಎರಡು ಶಕ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಂಡಾಮಾನ್ ಮತ್ತು ನಿಕೋಬಾರ್ ನಿಂದ ಸುಮಾರು 40 ಕಿ.ಮೀ ದೂರದಿಂದ ಅಲಿ ಭೂತವನ್ನು ಮಂಗಳೂರಿನ ಅರಿಕ್ಕಾಡು ಪ್ರದೇಶಕ್ಕೆ ಕರೆತರಲಾಗುತ್ತದೆ.
ಅಲಿ ಭೂತಕ್ಕೆ ಹಿನ್ನೆಲೆ ಕಥೆಯೊಂದಿದ್ದು, ವ್ಯಾಪಾರಿಯೊಬ್ಬರು ಆ ಕಥೆಯನ್ನು ವಿವರಿಸಿದ್ದಾರೆ. ಅಲಿ ಭೂತವನ್ನು ಮಾಟಮಂತ್ರ ಪ್ರವೀಣವೆಂದೇ ಹೇಳಲಾಗುತ್ತದೆ. ಕಾಮದಿಂದ ಮಹಿಳೆಯನ್ನು ನೋಡಿದ್ದ ಅಲಿಭೂತ ಮಹಿಳೆಯನ್ನು ಓಡಿಸಿಕೊಂಡು ಬರುತ್ತಿರುತ್ತದೆ. ಈ ವೇಳೆ ಗ್ರಾಮಸ್ಥರು ಅಲಿಭೂತದಿಂದ ಮಹಿಳೆಯನ್ನು ರಕ್ಷಿಸುವಂತೆ ತಾಯಿ ಭಗವತಿ ಬಳಿ ಕೇಳಿಕೊಳ್ಳುತ್ತಾರೆ. ಅಲಿ ಭೂತಕ್ಕೆ ಸಾಕಷ್ಟು ಶಕ್ತಿಯಿದ್ದು, ತಲಿಸ್ಮನ್ ಎಂಬ ವಸ್ತ್ರಾ ಕವಚವನ್ನು ತೊಟ್ಟಿರುತ್ತಾನೆ. ಆ ಕವಚದ ಪರಿಣಾಮ ಆತನನ್ನು ಯಾರು ಹಿಮ್ಮೆಟ್ಟಿಸಲು ಸಾಧ್ಯವಾಗುವುದಿಲ್ಲ.
ಅಲಿಭೂತದಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ಮಹಿಳೆಯನ್ನು ತಾಯಿ ಭಗವತಿಯೆಂದೇ ಹೇಳಲಾಗುತ್ತದೆ. ಅಲಿ ವಸ್ತ್ರಾ ಕವಚದ ರಹಸ್ಯ ತಾಯಿ ಭಗವತಿಗೆ ತಿಳಿದಿತ್ತು. ಇದರಂತೆ ತಪ್ಪಿಸಿಕೊಂಡು ಓಡಿಹೋದ ಭಗವತಿ ಚತ್ರಾಂಪಲ್ಲಾ ಕೊಳದಲ್ಲಿ ಸ್ನಾನಕ್ಕೆ ಕುಳಿತು ಬಿಡುತ್ತಾಳೆ. ನಂತರ ಭಗವತಿಯನ್ನು ಕೊಳದಿಂದ ಎಳೆದು ಹೊರಕ್ಕೆ ತರಲು ಅಲಿ ಯತ್ನಿಸುತ್ತಾನೆ. ಈ ವೇಳೆ ಭಗವತಿ, ಅಲಿ ಕೊಳದೊಳಗೆ ಬರಲು ಅನುಮತಿ ನೀಡುತ್ತಾಳೆ.
ಭಗವತಿಯ ಉಪಾಯವನ್ನು ಅರಿಯದ ಅಲಿ ಕೊಳೆದಲ್ಲಿ ಇಳಿಯುವ ಸಲುವಾಗಿ ತಾನು ತೊಟ್ಟಿದ್ದ ರಕ್ಷಾ ಶಕ್ತಿ ಕವಚವನ್ನು ಬಿಟ್ಟಿ ಕೊಳದಲ್ಲಿ ಇಳಿಯುತ್ತಾನೆ. ನಂತರ ಚಾಮುಂಡಿ ಅವತಾರ ತಾಳುವ ಭಗವತಿ, ಅಲಿ ಮಾಡಿದ ಅನ್ಯಾಯ, ತಪ್ಪುಗಳ ಅರಿವು ಆತನಿಗೆ ಆಗುವಂತೆ ಮಾಡುತ್ತಾಳೆ. ನಂತರ ಕ್ಷಮೆಯಾಚುವ ಅಲಿ ತನ್ನ ಭಕ್ತನಾಗಿ ಮಾಡಿಕೊಳ್ಳುವಂತೆ ದೇವಿ ಬಳಿ ಮನವಿ ಮಾಡಿಕೊಳ್ಳುತ್ತಾನೆ. ಅಂತಿಮವಾಗಿ ಅಲಿಭೂತನನ್ನು ತಾಯಿ ಬಲಿ ಪಡೆಯುತ್ತಾಳೆ.
ಹೀಗಾಗಿಯೇ ಅಲಿಭೂತ ಇಂದಿಗೂ ಜಾತ್ರಾ ಸಮಯದಲ್ಲಿ ಚಾಮುಂಡಿ ಕ್ಷೇತ್ರಕ್ಕೆ ಆಗಮಿಸುತ್ತಾನೆ. ಭಗವತಿ ದೇಗುಲದಲ್ಲಿ ಮಾರ್ಚ್ 30 ರಿಂದ ಏಪ್ರಿಲ್ 6 ರ ಮಧ್ಯೆ ವಾರ್ಷಿಕ ಜಾತ್ರಾ ಸಮಾರಂಭವನ್ನು ಆಚರಿಸಲಾಗುತ್ತದೆ. ವಾರ್ಷಿಕ ಸಮಾರಂಭದಲ್ಲಿ ಅಲಿಭೂತ ಕೂಡ ಭಾಗಿಯಾಗುತ್ತಾನೆ. ಇಲ್ಲಿ ಪ್ರತೀನಿತ್ಯ ಪೂಜೆ ಸಲ್ಲಿಸಲಾಗುವುದಿಲ್ಲ. ಜಾತ್ರಾ ಸಂದರ್ಭದಲ್ಲಿ ತಿಂಗಳ ಪೂರ್ತಿ ಪೂಜೆ ಮಾಡಲಾಗುತ್ತದೆ. ತುಳು ಕ್ಯಾಲೆಂಡರ್ ನ ಪ್ರಕಾರ ಆಗಸ್ಟ್ 15 ರಿಂದ ಸೆಪ್ಟೆಂಬರ್ 15ರವರೆಗೆ ಪೂಜೆ ನಡೆಸಲಾಗುತ್ತದೆ.
ಜಾತ್ರಾ ಸಂದರ್ಭದಲ್ಲಿ ಸಾಕಷ್ಟು ಶಕ್ತಿಗಳಿಗೆ ಪೂಜೆ ನಡೆಸಲಾಗುತ್ತದೆ. ಅಲಿ ಶಕ್ತಿಗೂ ಮೂರು ದಿನಗಳ ಕಾಲ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಮುಸ್ಲಿಮರು ಗ್ರಾಮಕ್ಕೆ ಬರುತ್ತಾರೆ. ಸಾಕಷ್ಟು ಭಕ್ತರು ಅಲಿಭೂತಕ್ಕೆ ಮಲ್ಲಿಗೆ ಹೂವನ್ನು ನೀಡುತ್ತಾರೆ. ಅಲಿಭೂತ ಏನು ಹೇಳುವುದೋ ಅದು ವರ್ಷದೊಳಗಾಗಿ ಆಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಮೂಡಿದೆ. ಅಲಿಭೂತದ ಆಶೀರ್ವಾದದ ಪರಿಣಾಮ ಉದ್ಯೋಗ ಹಾಗೂ ಕಾಣೆಯಾದ ವ್ಯಕ್ತಿಗಳು ಶೀಘ್ರಗತಿಯಲ್ಲಿ ಸಿಗುತ್ತಾರೆಂಬ ನಂಬಿಕೆಯಿದೆ.
ಹಲವು ವರ್ಷಗಳಿಂದ ಮಕ್ಕಳಿಲ್ಲದೆ ಕೊರಗುತ್ತಿದ್ದ ದಂಪತಿಗಳಿಗೆ ಅಶ್ಚರ್ಯವೆಂಬಂತೆ ಇದೀಗ ಮಕ್ಕಳಾಗಿದೆ. ಇದಕ್ಕೆ ಪ್ರತಿಯಾಗಿ ಆ ದಂಪತಿಗಳು ಅಲಿಭೂತಕ್ಕೆ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ನೀಡಿದ್ದಾರೆಂದು ವ್ಯಾಪಾರಸ್ಥ ಮಹೋತ್ಸವ ಹಾಗೂ ಅಲಿಭೂತದ ಹಿನ್ನೆಲೆಯ ವಿವರಣೆಯನ್ನು ನೀಡಿದ್ದಾರೆ.