ಗಣಪತಿ 
ರಾಜ್ಯ

ಗೃಹ ಸಚಿವ ಪರಮೇಶ್ವರ್ ಅವರ ಮಾತುಗಳಿಂದ ನೋವಾಗಿದೆ: ಡಿವೈಎಸ್ಪಿ ಗಣಪತಿ ಪತ್ನಿ

ಕೌಟುಂಬಿಕ ಸಮಸ್ಯೆ ಹಾಗೂ ಮಾನಸಿಕ ಖಿನ್ನತೆ ಗಣಪತಿ ಆತ್ಮಹತ್ಯೆಗೆ ಕಾರಣ ಎಂದು ಗೃಹ ಸಚಿವ ಪರಮೇಶ್ವರ್ ನೀಡಿರುವ ಹೇಳಿಕೆಯಿಂದ ಮನಸ್ಸಿಗೆ ತುಂಬಾ ..

ರಂಗಸಮುದ್ರ: ಕೌಟುಂಬಿಕ ಸಮಸ್ಯೆ ಹಾಗೂ ಮಾನಸಿಕ ಖಿನ್ನತೆ ಗಣಪತಿ ಆತ್ಮಹತ್ಯೆಗೆ ಕಾರಣ ಎಂದು ಗೃಹ ಸಚಿವ ಪರಮೇಶ್ವರ್ ನೀಡಿರುವ ಹೇಳಿಕೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಮೃತ ಡಿವೈಎಸ್ ಪಿ ಪತ್ನಿ ಪಾವನಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕೊಡಗು ಜಿಲ್ಲೆಯ ಕುಶಾಲನಗರದಿಂದ 11 ಕಿಮೀ ದೂರದಲ್ಲಿರುವ ರಂಗಸಮುದ್ರ ಗ್ರಾಮದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಪಾವನಾ, 20 ವರ್ಷಗಳ ಹಿಂದೆ ನಮ್ಮ ವಿವಾಹವಾಗಿದ್ದು, ಇಬ್ಬರು ಮಕ್ಕಳ ಜೊತೆ ನಾವು ಸಂತೋಷದಿಂದ ಜೀವನ ನಡೆಸುತ್ತಿದ್ದೆವು.

ಗಣಪತಿ ಅವರಿಗೆ ಬೆಂಗಳೂರಿಗೆ ವರ್ಗಾವಣೆಯಾದಾಗ ಕುಟುಂಬವನ್ನು ಅಲ್ಲಿಗೆ ಶಿಫ್ಟ್ ಮಾಡುವಂತೆ ಕೇಳಿದ್ದೆ, ಆದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆಂಬ ಹಿನ್ನೆಲೆಯಲ್ಲಿ ಗಣಪತಿ ಕುಟುಂಬವನ್ನು ಬೆಂಗಳೂರಿಗೆ ಕರೆದೊಯ್ಯಲು ನಿರಾಕರಿಸಿದ್ದರು ಎಂದು ಹಳೇಯ ನೆನಪುಗಳನ್ನು ಪಾವನಾ ಬಿಚ್ಚಿಟ್ಟಿದ್ದಾರೆ.

ತಮ್ಮ ನೌಕರಿಯಲ್ಲಿರುವ ಹಲವು ಸಮಸ್ಯೆಗಳ ಬಗ್ಗೆ ಗಣಪತಿ ಮಕ್ಕಳ ಬಳಿ ಹೇಳಿಕೊಳ್ಳುತ್ತಿದ್ದರು. ಅವರಿಗೆ ಮಾನಸಿಕ ಖಿನ್ನತೆ ಇರಲಿಲ್ಲ, ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳ ಕಿರುಕುಳದಿಂದ ಸದಾ ಒತ್ತಡದಲ್ಲಿದ್ದರು ಎಂದು ಪಾವನಾ ಹೇಳಿದ್ದಾರೆ.

ರೌಡಿ ಶೀಟರ್ ಎನ್ ಕೌಂಟರ್ ಪ್ರಕರಣವನ್ನು ರಿಓಪನ್ ಮಾಡಿ ಅವರನ್ನು ಅಮಾನತುಗೊಳಿಸಿದ ಮೇಲೆ ಗಣಪತಿ ಸಾಕಷ್ಟು ಬಸವಳಿದಿದ್ದರು. ಅವರ ಬ್ಯಾಚ್ ಮೇಟ್ ಗೆ ಇವರಿಗಿಂತ ಮೊದಲೇ ಬಡ್ತಿ ಸಿಕ್ಕಿತ್ತು, ಆದರೆ ಇವರಿಗೆ ಪ್ರಮೋಷನ್ ನೀಲು ವಿಳಂಬವಾಗಿದ್ದಕ್ಕೆ ತುಂಬಾ ನೊಂದಿದ್ದರು. ಹೀಗಾಗಿ ನನ್ನ ಪತಿಯ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪಾವನಾ ಹೇಳಿದ್ದಾರೆ. ಗಣಪತಿ ಅವರ ಹಿರಿಯ ಪುತ್ರ ನೇಹಲ್ ಮಂಗಳೂರಿನಲ್ಲಿ ಮೊದ ವರ್ಷದ ಎಂಜಿನೀಯರಿಂಗ್ ನಲ್ಲಿ ಓದುತ್ತಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT