ಮೃತ ಚಿರತೆ 
ರಾಜ್ಯ

ಮೈಸೂರು :ಎರಡು ಚಿರತೆಗಳಿಗೆ ವಿಷವಿಕ್ಕಿ ಕೊಂದ ಗ್ರಾಮಸ್ಥರು

ಸತ್ತ ನಾಯಿಗೆ ವಿಷ ಹಾಕಿ ಎರಡು ಚಿರತೆಗಳನ್ನು ಗ್ರಾಮಸ್ಥರು ಕೊಂದಿರುವ ಘಟನೆ ಬಂಡೀಪುರ ಬಳಿಯ ಹಂಚಿಪುರದ ಗ್ರಾಮದಲ್ಲಿ ಮಂಗಳವಾರ ನಡೆದಿದೆ...

ಮೈಸೂರು: ಸತ್ತ ನಾಯಿಗೆ ವಿಷ ಹಾಕಿ ಎರಡು ಚಿರತೆಗಳನ್ನು ಗ್ರಾಮಸ್ಥರು ಕೊಂದಿರುವ ಘಟನೆ ಬಂಡೀಪುರ ಬಳಿಯ ಹಂಚಿಪುರದ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಬಂಡಿಪುರ ಹುಲಿ ರಕ್ಷಿತಾರಣ್ಯದ ಅಂಚಿನ ಗ್ರಾಮವಾದ ಇಲ್ಲಿನ ಶಿವಚನ್ನಯ್ಯ ಎಂಬುವರ ತೋಟದಲ್ಲಿ ಅಪರೂಪದ ಕರಿ ಚಿರತೆ ಮತ್ತು ಚುಕ್ಕೆ ಚಿರತೆ ಸಾವನ್ನಪ್ಪಿವೆ. ಚಿರತೆಗಳು ಗ್ರಾಮದಿಂದ ಹೊತ್ತೂಯ್ದು ತಿಂದು ಉಳಿಸಿದ್ದ ಮೃತ ನಾಯಿಯ ಶವಕ್ಕೆ ವಿಷ ಹಾಕಲಾಗಿತ್ತು. ಆ ನಾಯಿಯನ್ನು ತಿಂದ ಚಿರತೆಗಳು ಸಾವನ್ನಪ್ಪಿವೆ.

ಚಿರತೆಗಳು ಬಿದ್ದಿರುವ ವಿಷಯ ತಿಳಿದ ಸ್ಥಳೀಯ ಫಾರೆಸ್ಟ್ ಆಫೀಸರ್ ನವೀನ್ ಕುಮಾರ್ ಕೂಡಲೇ ಗ್ರಾಮಕ್ಕೆ ಆಗಮಿಸಿದ್ದಾರೆ. ಅವುಗಳನ್ನು ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯುವ ಮಾರ್ಗ ಮಧ್ಯದಲ್ಲಿ ಚಿರತೆಗಳು ಸಾವನ್ನಪ್ಪಿವೆ. ಎರಡು ಚಿರತೆಗಳು ಸಹೋದರುಗಳಾಗಿದ್ದು, ಒಂದೂವರೆ ವರ್ಷದ ವಯಸ್ಸಿನ ಚಿರತೆಗಳಾಗಿವೆ.

ಗ್ರಾಮದಲ್ಲಿ ಚಿರತೆ ದಾಳಿಯಿಂದ ಸಾಕಷ್ಟು ಹಸು, ಕುರಿಗಳು ಬಲಿಯಾಗಿವೆ. ಈ ಬಗ್ಗೆ ದೂರು ನೀಡಿದರು ಸಂಬಂಧಿತ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಬಂದಿರಲಿಲ್ಲ. ಚಿರತೆಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಆಗಮಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ