ಶ್ರೀ ಸಿದ್ದಗಂಗಾ ಮಠರ ಶಿವಕುಮಾರ ಸ್ವಾಮೀಜಿ 
ರಾಜ್ಯ

ತುಮಕೂರು: ಗೌರಿಶಂಕರ ಸ್ವಾಮೀಜಿ ಭೇಟಿಯಾಗಲು ಸಿದ್ದಗಂಗಾ ಶ್ರೀ ನಕಾರ

ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗುವ ಬಯಕೆ ಹೊಂದಿ, ಮಠದಿಂದ ಹೊರಹಾಕಲ್ಪಟ್ಟಿದ್ದ ಶ್ರೀ ಗೌರಿ ಶಂಕರ ಸ್ವಾಮೀಜಿ ಅವರನ್ನು ಭೇಟಿಯಾಗಲು ..

ತುಮಕೂರು : ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗುವ ಬಯಕೆ ಹೊಂದಿ, ಮಠದಿಂದ ಹೊರಹಾಕಲ್ಪಟ್ಟಿದ್ದ ಶ್ರೀ ಗೌರಿ ಶಂಕರ ಸ್ವಾಮೀಜಿ ಅವರನ್ನು ಭೇಟಿಯಾಗಲು ಶಿವಕುಮಾರ ಸ್ವಾಮೀಜಿ ಅವರು ನಿರಾಕರಿಸಿದ್ದಾರೆ.

ಶ್ರೀ ಸಿದ್ದಗಂಗಾ ಮಠದಲ್ಲಿ 1 ಗಂಟೆ  ಸಮಯ ಇರಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದು ಇಂದು ತುಮಕೂರಿಗೆ ಆಗಮಿಸಿದ್ದರು. ಆದರೆ ಶಿವಕುಮಾರ ಶ್ರೀಗಳು ಭೇಟಿ ನಿರಾಕರಿಸಿದ ಹಿನ್ನಲೆಯಲ್ಲಿ ವಾಪಾಸು  ತೆರಳಿದ್ದಾರೆ.

ಶಿವಕುಮಾರ ಶ್ರೀಗಳು ಪತ್ರವೊಂದನ್ನು ಬರೆದು ಕ್ಯಾತ್ಸಂದ್ರ ಇನ್ಸ್‌ಪೆಕ್ಟರ್‌ ಅವರಿಗೆ ನೀಡಿ  ಗೌರಿಶಂಕರ ಶ್ರೀಗಳಿಗೆ ನೀಡಲು ಹೇಳಿದ್ದಾರೆ. 'ನಿಮ್ಮನ್ನು ಭೇಟಿಯಾಗುವುದು ನನಗೆ ಇಷ್ಟವಿಲ್ಲ,ನಾನು ಅನಾರೋಗ್ಯದಿಂದ ಇರುವುದರಿಂದ ಮಾನಸಿಕ ತೊಂದರೆ ಯಾಗುತ್ತದೆ. ಆದ್ದರಿಂದ ಬರುವುದು ಬೇಡ, ಬಂದರೆ ಮಠದ ದೈನಂದಿನ ಕಾರ್ಯಗಳಿಗೆ ತೊಂದರೆಯಾಗುತ್ತದೆ' ಎಂದು ಪತ್ರದಲ್ಲಿ ಶೀಗಳು ಬರೆದಿದ್ದರು.  

ಗುರುಗಳ ಆರೋಗ್ಯ ವಿಚಾರಣೆಯ ಸಲುವಾಗಿ ನಾನು ಭೇಟಿಯಾಗಿ ಆಶೀರ್ವಾದ ಪಡೆಯಲು ನಿರ್ಧರಿಸಿದ್ದೆ. ಗುರುಗಳು ಬರುವುದು ಬೇಡ ಎಂದು ಪತ್ರ ಕಳುಹಿಸಿದ್ದಾರೆ. ಬಲವಂತವಾಗಿ ಹೋಗುವುದು ಉತ್ತಮವಲ್ಲ ಆದ್ದರಿಂದ ಈ ಘಟನೆ ಬಗ್ಗೆ ನನಗೆ ನಿರಾಸೆಯಾಗಿರುವುದು  ಸಹಜ , ನಾನು ವಾಪಾಸು ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT