ಪತಿ ಆಕಾಶ್ ಕುಮಾರ್ ರೋಸ್ ಮತ್ತು ಪತ್ನಿ ಕೃಪಾ (ಸಂಗ್ರಹ ಚಿತ್ರ) 
ರಾಜ್ಯ

ವೃದ್ಧನ ವರಿಸಿದ ಬೆಂಗಳೂರು ಯುವತಿಯಿಂದ ಈಗ ಪಾಲಕರ ವಿರುದ್ಧವೇ ದೂರು!

64 ವರ್ಷದ ವೃದ್ಧನನ್ನು ವಿವಾಹವಾಗುವ ಮೂಲಕ ತೀವ್ರ ಸುದ್ದಿಗೆ ಗ್ರಾಸವಾಗಿದ್ದ 27 ವರ್ಷದ ಯುವತಿ ಕೃಪಾ ಇದೀಗ ತನ್ನ ಪೋಷಕರ ವಿರುದ್ಧವೇ ದೂರು ದಾಖಲಿಸಿದ್ದಾರೆ...

ಬೆಂಗಳೂರು: 64 ವರ್ಷದ ವೃದ್ಧನನ್ನು ವಿವಾಹವಾಗುವ ಮೂಲಕ ತೀವ್ರ ಸುದ್ದಿಗೆ ಗ್ರಾಸವಾಗಿದ್ದ 27 ವರ್ಷದ ಯುವತಿ ಕೃಪಾ ಇದೀಗ ತನ್ನ ಪೋಷಕರ ವಿರುದ್ಧವೇ ದೂರು ದಾಖಲಿಸಿದ್ದಾರೆ.

ಕಳೆದ ವಾರ ರಾಜರಾಜೇಶ್ವರಿ ನಗರದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿ ಆವರಣದಲ್ಲಿ 64 ವರ್ಷದ ತನ್ನ ಪತಿ ಡಾ. ಆಕಾಶ್‌ಕುಮಾರ್ ಅವರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಸಂಬಂಧ ಪತ್ನಿ  ಕೃಪಾ ಹೆಚ್ ಪ್ರಜಾಪತಿ ತಂದೆ ಹಸನ್ಮುಖ್ ಪ್ರಜಾಪತಿ ಮತ್ತು ತಾಯಿ ಸ್ಮಿತಾ ವಿರುದ್ಧ ದೂರು ದಾಖಲಿಸಿದ್ದಾರೆ. ಪತಿ ಮೇಲೆ ಹಲ್ಲೆ ನಡೆಸಿರುವ ತನ್ನ ಪಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ  ಕೃಪಾ ಹೆಚ್ ಪ್ರಜಾಪತಿ ನಿನ್ನೆ ರಾಜರಾಜೇಶ್ವರಿನಗರದ ಪೊಲೀಸ್ ಠಾಣೆ ಯ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

ಹೆಣ್ಣೂರು ಬಂಡೆಯಲ್ಲಿರುವ ಖಾಸಗಿ ಕಾಲೇಜು ಸಂಸ್ಥಾಪಕ ಡಾ. ಆಕಾಶ್ ಕುಮಾರ್ ಹಾಗೂ ಇದೇ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಕೃಪಾ ಅವರನ್ನು ಪ್ರೀತಿಸಿ ರಹಸ್ಯವಾಗಿ ವಿವಾಹವಾಗಿದ್ದರು.  ದಂಪತಿ ವಿವಾಹ ನೋಂದಣಿ ಮಾಡಿಸಲು ನಿರ್ಧರಿಸಿ, ಕಳೆದ ವಾರ ರಾಜರಾಜೇಶ್ವರಿ ನಗರ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕೃಪಾ ಪಾಲಕರಿಂದ ಆಕ್ಷೇಪ  ವ್ಯಕ್ತವಾಗಿದ್ದರಿಂದ, ಜೂನ್ 3ರಂದು ಮಾತುಕತೆಗಾಗಿ ಸಬ್‌ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳು ಆಕಾಶ್‌ಕುಮಾರ್ ದಂಪತಿ ಹಾಗೂ ಕೃಪಾ ಪಾಲಕರಿಗೆ ನೋಟಿಸ್ ಜಾರಿ ಮಾಡಿದ್ದರು. ಜೂನ್  3ರಂದು ಮಾತುಕತೆಗಾಗಿ ಆಗಮಿಸಿದಾಗ, ಕೃಪಾ ಪಾಲಕರು ಹಾಗೂ ಸ್ಥಳೀಯರು ಜಗಳ ತೆಗೆದು ಆಕಾಶ್ ಅವರನ್ನು ಥಳಿಸಿದ್ದರು.

ಈ ಘಟನೆ ಸಂಬಂಧ ತಂದೆ ಪ್ರಜಾಪತಿ ಹಾಗೂ ತಾಯಿ ಸ್ಮಿತಾ ಅವರ ವಿರುದ್ಧ ಕೃಪಾ ದೂರು ದಾಖಲಿಸಿದ್ದಾರೆ. ಅಲ್ಲದೆ ಕೃಪಾ ಪೋಷಕರಾದ ಪ್ರಜಾಪತಿ ದಂಪತಿ ಬಂಧನಕ್ಕೆ ಕೋರ್ಟ್  ಅನುಮತಿ ಕೇಳಲಾಗಿದೆ. ವಾರೆಂಟ್ ಜಾರಿಯಾದ ನಂತರ ವಶಕ್ಕೆ ಪಡೆಯಲಾಗುವುದು ಎಂದು ರಾಜರಾಜೇಶ್ವರಿನಗರ ಪೊಲೀಸರು ತಿಳಿಸಿದ್ದಾರೆ.  ಇದೇ ವೇಳೆ ಪ್ರಜಾಪತಿ ದಂಪತಿ ಸೆಷನ್ಸ್  ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT