ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್ ಸೈಟ್ ನ್ನು ಪಾಕಿಸ್ತಾನದ ಕೆಲ ಹ್ಯಾಕರ್ಸ್ಗಳು ಶುಕ್ರವಾರ ಹ್ಯಾಕ್ ಮಾಡಿದ್ದರು.
ಪೊಲೀಸ್ ಇಲಾಖೆ ವೆಬ್ ಸೈಟನ್ನು ಕೆಲಸ ಕಾಲ ಹ್ಯಾಕ್ ಮಾಡಿದ್ದಾರೆಂಬ ಮಾಹಿತಿ ತಿಳಿದ ಕೂಡಲೇ ಎಚ್ಚೆತ್ತುಕೊಂಡ ರಾಜ್ಯ ಸೈಬರ್ ಕ್ರೈಂ ಅಧಿಕಾರಿಗಳು ವೆಬ್'ನ್ನು ಸರಿಪಡಿಸುವ ಮೂಲಕ ಭದ್ರತೆಯನ್ನು ಹೆಚ್ಚಿಸಿದ್ದರು.
ದೇಶದ 9 ಇಲಾಖೆಗಳ ಅಧಿಕೃತ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ್ದ ಪಾಕಿಸ್ತಾನದ ದುಷ್ಕರ್ಮಿಗಳು ಮುಖಪುಟದಲ್ಲಿ ಸೈಬರ್ ಭದ್ರತೆಯನ್ನು ವ್ಯಂಗ್ಯಮಾಡಿದ್ದರು. ರಾಜ್ಯ ಪೊಲೀಸ್ ವೆಬ್ ಸೈಟ್ ನ್ನು ಹ್ಯಾಕ್ ಮಾಡಿ ನಾವು ಸೈಬರ್ ಹ್ಯಾಕರ್ಸ್ ಗಳು ನಿಮ್ಮ ಸೈಬರ್ ಭದ್ರತೆಗೆ ನಾಚಿಕೆಯಾಗಬೇಕೆಂದು ಹೇಳಿದ್ದಾರೆ.
ದಿ ಹ್ಯಾಕರ್ಸ್ ಆರ್ಮಿ ಆ್ಯಂಡ್ ಆಲ್ ಪಾಕಿಸ್ತಾನಿ ಹ್ಯಾಕರ್ಸ್ ಎಂದು ಅವಹೇಳನಕಾರಿಯಾಗಿ ಪೊಸ್ಟ್ ಗಳನ್ನು ಹಾಕಿದ್ದರು. ಜತೆಗೆ ಇದನ್ನು ಹ್ಯಾಕ್ ಮಾಡಿರುವುದು ಫೈಜಲ್ 1337ಎನ್ನುವ ಹೆಸರಿನಲ್ಲಿ ಎಂದು ನಮೂದಿಸಿದ್ದರು.
ವೆಬ್ ಸೈಟ್ ನಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿ, ಠಾಣೆಗಳ ವಿವರ, ಸಂಖ್ಯೆ, ಸಂಬಳ ಸೇರಿದಂತೆ ಇಲಾಖೆಯ ಮಹತ್ವದ ಮಾಹಿತಿಯನ್ನು ಹಾಕಲಾಗಿತ್ತು.