ರಾಜ್ಯ

ರಸ್ತೆ ಮೇಲೆ ಅತಿಹೆಚ್ಚು ವಾಹನ, ದೆಹಲಿ ನಂತರ ಬೆಂಗಳೂರಿಗೆ 2ನೇ ಸ್ಥಾನ!

Lingaraj Badiger
ಬೆಂಗಳೂರು: ದೇಶದ ಅತಿ ಹೆಚ್ಚು ಮಾಲಿನ್ಯ ನಗರಗಳಾದ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಬೆಂಗಳೂರು ಇದೀಗ ರಸ್ತೆಯ ಮೇಲೆ ಅತಿಹೆಚ್ಚು ವಾಹನ ಓಡಾಟದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿವೆ.
ಮಾರ್ಚ್ 31, 2016ರಂದು ಬೆಂಗಳೂರಿನಲ್ಲಿ ಒಟ್ಟು 61 ಲಕ್ಷ ವಾಹನಗಳು ರಸ್ತೆಗಿಳಿದಿರೆ, ಮೊದಲ ಸ್ಥಾನದಲ್ಲಿರುವ ದೆಹಲಿಯಲ್ಲಿ ಸುಮಾರು 88 ಲಕ್ಷ ವಾಹನಗಳು ಸಂಚರಿಸಿವೆ,
ಇನ್ನುಳಿದಂತೆ ಕ್ರಮವಾಗಿ ಚೆನ್ನೈ 44.7 ಲಕ್ಷ ವಾಹನಗಳು, ಕೋಲ್ಕತ 38.6 ಲಕ್ಷ ವಾಹನಗಳು, ಮುಂಬೈ 27 ಲಕ್ಷ ವಾಹನಗಳ ಸಂಚಾರಕ್ಕೆ ಸಾಕ್ಷಿಯಾಗುತ್ತಿವೆ.
ಬೆಂಗಳೂರಿನಲ್ಲಿ ವಾಹನ ದಟ್ಟಣೆ ಹೆಚ್ಚಲು ಕ್ಯಾಬ್​ಗಳ ನೋಂದಣಿ ಕಳೆದ ವರ್ಷಕ್ಕಿಂತ ಈ ವರ್ಷ 24,000 ಹೆಚ್ಚಿದೆ. ಈ ವರ್ಷ 1.08 ಲಕ್ಷ ಕ್ಯಾಬ್​ಗಳು ರಸ್ತೆಗಿಳಿದಿವೆ ಎಂದು ಆರ್​ಟಿಓ ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT