ರಾಜ್ಯ

ಚಿತ್ರದುರ್ಗ: ಬರಪೀಡಿತ ಗ್ರಾಮದಲ್ಲಿ ಮಳೆಗಾಗಿ ಬಾಲಕನ ಬೆತ್ತಲೆ ಮೆರವಣಿಗೆ

Srinivas Rao BV

ಚಿತ್ರದುರ್ಗ: ರಾಜ್ಯದಲ್ಲಿ ಮೌಢ್ಯದ ಆಚರಣೆಯ ಪರಮಾವಧಿಯನ್ನು ಬಯಲುಗೊಳಿಸುವಂತಹ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಮಳೆ ಇಲ್ಲದೇ ಬರದಿಂದ ತತ್ತರಿಸಿರುವ ಚಿತ್ರದುರ್ಗದ ಪಂಡರಹಳ್ಳಿಯಲ್ಲಿ ಬಾಲಕನನ್ನೋಬ್ಬನನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಲಾಗಿದೆ. ಜೂ,10 ರಂದು ಈ ಘಟನೆ ನಡೆದಿದ್ದು ಬಾಲಕನನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಮಳೆಗಾಗಿ ಪೂಜೆ ಸಲ್ಲಿಸುವ ಭಾಗವಾಗಿ ಬೆತ್ತಲೆಗೊಳಿಸಿದ್ದ ಬಾಲಕನ ಮೇಲೆ ನೀರು ಹಾಕಲಾಗಿದ್ದು, ನಂತರ ವಿಗ್ರಹವೊಂದನ್ನು ಹಿಡಿದ ಬಾಲಕನನ್ನು ಮೆರವಣಿಗೆ ಮಾಡಲಾಗಿದೆ.   

ಮೆರವಣಿಗೆ ನಂತರ ಬಾಲಕನಿಗೆ ಹೊಸ ಬಟ್ಟೆ ನೀಡಲಾಗಿದ್ದು, ಇದು ಮಳೆಗಾಗಿ ನಡೆದ ವಿಶೇಷ ಪ್ರಾರ್ಥನೆ ಎನ್ನುತ್ತಾರೆ ಪಂಡರಹಳ್ಳಿ ಗ್ರಾಮಸ್ಥರು. ಗ್ರಾಮದ ಸಣ್ಣ ಬಾಲಕನೊಬ್ಬನನ್ನು ಬೆತ್ತಲಾಗಿಸಿ ಅವನ ತಲೆ ಮೇಲೆ ಮಣ್ಣಿನಿಂದ ಮಾಡಲಾದ ವಿಗ್ರಹವನ್ನಿಟ್ಟು ಪೂಜೆ ಮಾಡಿ ಮೆರವಣಿಗೆ ಮಾಡಲಾಗುವುದರಿಂದ ಮಳೆ ಬರಲಿದೆ ಎಂಬುದು ಈ ಗ್ರಾಮಸ್ಥರ ನಂಬಿಕೆಯಾಗಿದೆ.

SCROLL FOR NEXT