ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಗಸ್ತಿನಲ್ಲಿರುವ ಪೊಲೀಸರು 
ರಾಜ್ಯ

ಶಿವಾಜಿನಗರದಲ್ಲಿ ಗ್ಯಾಂಗ್ ವಾರ್: ರೌಡಿಶೀಟರ್ ಪರ್ವೇಜ್ ಹತ್ಯೆ

ಶಿವಾಜಿನಗರದಲ್ಲಿ ಎರಡು ರೌಡಿ ಗುಂಪುಗಳ ನಡುವೆ ಗುಂಡಿನ ದಾಳಿ ನಡೆದಿದ್ದು, ಗುಂಡಿನ ದಾಳಿಯಲ್ಲಿ ಪರ್ವೇಜ್ ಎಂಬ ರೌಡಿಶೀಟರ್ ನನ್ನು ಮಂಗಳವಾರ...

ಬೆಂಗಳೂರು: ಶಿವಾಜಿನಗರದಲ್ಲಿ ಎರಡು ರೌಡಿ ಗುಂಪುಗಳ ನಡುವೆ ಗುಂಡಿನ ದಾಳಿ ನಡೆದಿದ್ದು, ಗುಂಡಿನ ದಾಳಿಯಲ್ಲಿ ಪರ್ವೇಜ್ ಎಂಬ ರೌಡಿಶೀಟರ್ ನನ್ನು ಮಂಗಳವಾರ ಹತ್ಯೆ ಮಾಡಲಾಗಿದೆ.

ಹೆಗಡೆ ನಗರದ ಪರ್ವೇಜ್ (50) ಹತ್ಯೆಯಾದ ರೌಡಿ. ರೌಡಿ ಶೀಟರ್ ಶಬಿರ್ ಎಂಬಾತ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಹತ್ಯೆಯಾದ ಪರ್ವೇಜ್ ಸಹೋದರ ಪಪ್ಪು ಹಾಗೂ ರೌಡಿ ಶೀಟರ್ ಶಬಿರ್ ನಡುವೆ ನಾಲ್ಕು ದಿನಗಳ ಹಿಂದಷ್ಟೇ ಹಣಕಾಸು ವಿಚಾರ ಕುರಿತಂತೆ ಜಗಳವಾಗಿದೆ. ಪಪ್ಪು ಹತ್ಯೆಗೆ ಶಬಿರ್ ಮತ್ತು ಸ್ನೇಹಿತರು ಸಂಚು ರೂಪಿಸಿದ್ದರು.

ಇಧರಂತೆ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಪಪ್ಪುನನ್ನು ಹುಡುಕಿಕೊಂಡು ಶಿವಾಜಿನಗರಕ್ಕೆ ಬಂದಿದ್ದರು. ಅದೇ ಸಮಯಕ್ಕೆ ಕೊಲೆಯಾದ ಪರ್ವೇಜ್ ಮತ್ತು ಸ್ನೇಹಿತರು ಮಸೀದಿ ಬಳಿ ಆಯೋಜಿಸಿದ್ದ್ ಇಫ್ತಿಯಾರ್ ಕೂಟ ಮುಗಿಸಿಕೊಂಡು ಹೊರ ಬಂದಿದ್ದರು. ಈ ವೇಳೆ ಶಬಿರ್ ತಂಡ ಪಪ್ಪು ಬಗ್ಗೆ ವಿಚಾರಿಸಿದ್ದಾರೆ. ಪಪ್ಪು ಬಗ್ಗೆ ಮಾಹಿತಿ ಇಲ್ಲ ಎಂದು ಪರ್ವೇಜ್ ಹೇಳಿದ್ದಾರೆ.

ಇದರಿಂದ ಕೋಪಗೊಂಡ ಶಬಿರ್ ಮತ್ತು ಆತನ ಸ್ನೇಹಿತರು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ನಂತರ ಪರ್ವೇಜ್ ಮೇಲೆ ಮೂರು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ಪರಿಣಾಮ ಪರ್ವೇಜ್ ಹೊಟ್ಟೆ ಹಾಗೂ ತೊಡೆ ಭಾಗದಲ್ಲಿ ತೀವ್ರವಾಗಿ ರಕ್ತಸ್ರಾವವಾಗಿದೆ. ಆಸ್ಪತ್ರೆಗೆ ಸಾಗಿಸುವ ವೇಳೆ ಪರ್ವೇಜ್ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ಇನ್ನು ದಾಳಿ ವೇಳೆ ಪರ್ವೇಜ್ ಜೊತೆಗಿದ್ದ ಗೆಳೆಯರಾದ ವಾಜಿದ್ ಹಾಗೂ ಅಸಿಫ್ ಅವರಿಗೂ ಗಾಯಗಾಗಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?