ಉಮಾ ಮಹೇಶ್ವರ್ 
ರಾಜ್ಯ

ಅಪಘಾತವಾಗಿ 3 ದಿನಗಳ ಬಳಿಕ ವ್ಯಕ್ತಿ ಮೃತದೇಹ ಪತ್ತೆ

ಬೈಕ್ ನಿಂದ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದ್ದ ವ್ಯಕ್ತಿಯ ಶವವೊಂದು ಮೂರು ದಿನಗಳ ಬಳಿಕ ದೊರಕಿರುವ ಘಟನೆ ಗುರುವಾರ ನಡೆದಿದೆ...

ಬೆಂಗಳೂರು: ಬೈಕ್ ನಿಂದ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದ್ದ ವ್ಯಕ್ತಿಯ ಶವವೊಂದು ಮೂರು ದಿನಗಳ ಬಳಿಕ ದೊರಕಿರುವ ಘಟನೆ ಗುರುವಾರ ನಡೆದಿದೆ.

ಉಮಾ ಮಹೇಶ್ವರ್ (32) ಕೆ.ಆರ್. ಪುರಂ ನಿವಾಸಿಯಾಗಿದ್ದು, ಸೋಮವಾರ ಕೆ.ಆರ್. ಪುರಂನ ಐಟಿಐ ಕಾಲೋನಿ ಕೆರೆಯ ಬಳಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಈ ವೇಳೆ ಕೆರೆಗೆ ಬಿದ್ದಿದ್ದಾರೆ.  ಆದರೆ. ಈ ವಿಚಾರ ಯಾರಿಗೂ ತಿಳಿದಿಲ್ಲ.

ಉಮಾ ಮಹೇಶ್ವರ್ ಗಾಗಿ ಹುಡುಕಾಟ ಆರಂಭಿಸಿದ್ದ ಪೊಲೀಸರು ವಿಚಾರಣೆ ನಡೆಸುತ್ತಿದ್ದ ವೇಳೆ, ಮಹೇಶ್ವರ್ ಅವರು ಗೆಳೆಯನೊಬ್ಬನ ಮನೆಯಲ್ಲಿ ಪಾರ್ಟಿಯಿದ್ದ ಕಾರಣ ಪಾರ್ಟಿಯಲ್ಲಿ ತೀವ್ರವಾಗಿ ಮದ್ಯಪಾನ ಮಾಡಿದ್ದರು ಎಂದು ತಿಳಿದುಬಂದಿದೆ.

ತೀವ್ರವಾಗಿ ಮದ್ಯಪಾನ ಮಾಡಿದ್ದ ಮಹೇಶ್ವರ್ ಅವರಿಗೆ ಗೆಳೆಯರು ಆ ರಾತ್ರಿ ಅಲ್ಲಿಯೇ ಉಳಿಯುಂತೆ ತಿಳಿಸಿದ್ದಾರೆ. ಮಕ್ಕಳನ್ನು ಬೆಳಿಗ್ಗೆ ಶಾಲೆಗೆ ಬಿಡಬೇಕಿದ್ದು, ಈಗಲೇ ಹೊರಡುತ್ತೇನೆಂದು ಮಹೇಶ್ವರ್ ಹೇಳಿದ್ದನೆಂದು ಗೆಳೆಯರು ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ. ಇದರಂತೆ ತನಿಖೆ ವೇಳೆ ಉಮಾ ಮಹೇಶ್ವರ್ ಅವರ ಮೃತ ದೇಹ ಕೆರೆಯಲ್ಲಿ ಸಿಕ್ಕಿದೆ. ಘಟನೆಗೆ ಮಹೇಶ್ವರ್ ಅವರು ತೀವ್ರವಾಗಿ ಮದ್ಯಪಾನ ಮಾಡಿ ಬೈಕ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದೇ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!