ಬೆಂಗಳೂರು: ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕನೆಯ ಮದುವೆಯಾಗ ಹೊರಟ ವಂಚಕನಿಗೆ ಐದನೆಯ ಹುಡುಗಿ ಅಂದರೆ ಆತನ ಗರ್ಲ್ ಫ್ರೆಂಡ್ ಮತ್ತು ಆಕೆಯ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ನಡೆದಿದೆ.
ವಜ್ರೇಶ್ ಎಂಬಾತ ಮೊದಲ ಪತ್ನಿಗೆ ವಿಚ್ಛೇಧನ ನೀಡಿ 2 ನೇ ಮದುವೆಯಾಗಿದ್ದ ಬಳಿಕ ಆಕೆಯನ್ನು ತ್ಯಜಿಸಿ 3ನೇ ಮದುವೆಯಾಗಿದ್ದ ಇದೀಗ ನಾಲ್ಕನೇ ಮದುವೆಯ ಸಿದ್ದನಾಗಿದ್ದವನಿಗೆ ಪ್ರೇಮಿಸುವುದಾಗಿ ಹೇಳಿದ್ದ 5 ನೆ ಪ್ರಿಯತಮೆ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ
ವಜ್ರೇಶ್ ವಂಚನೆ ವಿಚಾರವನ್ನು ಪ್ರಶ್ನಿಸಲು 15 ದಿನಗಳ ಹಿಂದೆ ಮನೆಗೆ ತೆರಳಿದ್ದ 3 ನೇ ಪತ್ನಿಯ ಮೇಲೆ ನಾಯಿ ಬಿಟ್ಟು ಅದರಿಂದ ಕಚ್ಚಿಸಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ತಲಘಟ್ಟಪುರ ಪೊಲೀಸರಿಗೆ ದೂರನ್ನು ನೀಡಲಾಗಿತ್ತು. ವಜ್ರೇಶ್ ನನ್ನು ಕತ್ರಿಗುಪ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.