ಮೈಸೂರು ಅರಮನೆ 
ರಾಜ್ಯ

ಯುವರಾಜರ ವೈಭವೋಪೇತ ಮದುವೆ ಹೇಗಿರುತ್ತೆ ಎಂಬುದನ್ನು ನೋಡುವ ಅವಕಾಶ ಇಲ್ಲಿದೆ!

: 40 ವರ್ಷಗಳ ನಂತರ ಮೈಸೂರು ಅರಮನೆ ಮತ್ತೊಂದು ಅದ್ಧೂರಿ ವಿವಾಹಕ್ಕೆ ಸಿದ್ಧವಾಗಿದೆ.ಮೈಸೂರು ಒಡೆಯರ್ ಸಂತತಿಯ 27 ರಾಜಕುಮಾರ ಯದುವೀರ ಕೃಷ್ಣದತ್ತ ..

ಮೈಸೂರು: 40 ವರ್ಷಗಳ ನಂತರ ಮೈಸೂರು ಅರಮನೆ ಮತ್ತೊಂದು ಅದ್ಧೂರಿ ವಿವಾಹಕ್ಕೆ ಸಿದ್ಧವಾಗಿದೆ.ಮೈಸೂರು ಒಡೆಯರ್ ಸಂತತಿಯ 27 ರಾಜಕುಮಾರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ರಾಜಸ್ತಾನ ರಾಜ ಮನೆತೆನದ ತ್ರಿಶಿಕಾ ಕುಮಾರಿ ಅವರ ವಿವಾಹಕ್ಕೆ ಎಲ್ಲಾ ರೀತಿಯ ಸಿದ್ಥತೆ ನಡೆದಿದೆ.

ರಾಯಲ್‌ ಮದುವೆ ಅಂದ್ರೆ ರಾಜ ವೈಭವ, ಪ್ರತಿಷ್ಠೆ, ಆಡಂಬರ, ಅದ್ಧೂರಿತನ, ಘನತೆ, ಸಗಡರ, ಸಂಭ್ರಮದ್ದೇ ಮಾತು. ಆದರೆ, ಜನರೇ ನಮ್ಮ ಪ್ರಭುಗಳು ಎಂದು ಜನಾನುರಾಗಿ ಆಳ್ವಿಕೆ ನೀಡಿದ, ಸ್ವಾತಂತ್ರ್ಯಪೂರ್ವದಲ್ಲಿಯೇ ಆಧುನಿಕ ಶಿಕ್ಷಣದ ಮೂಲಕ ಸಾಮಾಜಿಕ ಸುಧಾರಣೆಗೆ ಶ್ರಮಿಸಿದ ಮೈಸೂರು ಅರಸರ ಮದುವೆ ಅಂದ್ರೆ, ಅದು ಕೇವಲ ರಾಯಲ್‌ ಅಷ್ಟೇ ಅಲ್ಲ. ಜನಸ್ನೇಹಿ ಮದುವೆ ಕೂಡ ಹೌದು.

1974 ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿವಾಹ ಅರಮನೆಯಲ್ಲಿ ನಡೆದಿತ್ತು. ವಿವಾಹ. ಮೈಸೂರು ಅರಮನೆ ಮೇಲೆ ಒಡೆಯರ್ ಮನೆತನಕ್ಕೆ ಯಾವುದೇ ಅಧಿಕಾರವಿಲ್ಲ, ಆದರೆ ಅಲ್ಲಿನ ಜನರ ಜೊತೆ  ಭಾವನಾತ್ಮಕ ಸಂಬಂಧವಿದೆ.

2014 ರಲ್ಲಿ ಶ್ರೀಕಂಠದತ್ತ ನರಸಿಂಹ ರಾಜ್ ಒಡೆಯರ್ ನಿಧನದ ನಂತರ ಅಂತಿಮ ಸಂಸ್ಕಾರದ ವಿಧಿವಿಧಾನಗಳು ನಡೆದ ನಂತರ ಅರಮನೆ ಸ್ತಬ್ಧವಾಗಿತ್ತು. ಈಗ ಮತ್ತೆ ಯದುವೀರ್ ವಿವಾಹದಿಂದಾಗಿ ಅರಮನೆ ಮತ್ತೆ ಕಳೆ ಗಟ್ಟಿದೆ.

1978 ಮತ್ತು 1980 ರಲ್ಲಿ ಮೈಸೂರು ರಾಜಕುಮಾರಿಯರಾದ ಇಂದ್ರಾಕ್ಷಿ ಮತ್ತು ವಿಶಾಲಾಕ್ಷಿ ಅವರ ವಿವಾಹ ಅರಮನೆಯಲ್ಲಿ ನಡೆದಿತ್ತು. ರಾಜಮನೆತೆನದ ಮದುವೆ ಹಾಗೆ ನಡೆಯಿತು, ಹೀಗೆ ನಡೆಯಿತು ಎಂದು ನಾವೆಲ್ಲಾ ಹಿರಿಯಿ ಬಾಯಿಂದ ಕೇಳುತ್ತಿದ್ದೆವು, ಆದರೆ ಈಗ ರಾಜಮನೆತನದವರ ಮದುವೆ ಹೇಗಿರುತ್ತೆ ಎಂಬುದನ್ನು ಕಣ್ಣಾರೆ ನೋಡಲು ಅವಕಾಶ ಸಿಕ್ಕಿದೆ.

ಮೈಸೂರು ಒಡೆಯರ ಸಂಪ್ರದಾಯದಂತೆ ಯಾವುದೇ ಆಚರಣೆಗಳಿಗೂ ಧಕ್ಕೆಯಾಗದ ರೀತಿಯಲ್ಲಿ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಲಾಗುವುದು ಎಂದು ಪ್ರಮೋದಾ ದೇವಿ ಒಡೆಯರ್ ತಿಳಿಸಿದ್ದಾರೆ.

1918 ರಲ್ಲಿ ಜಯಚಾನರಾಜ ಒಡೆಯರ್ ವಿವಾಹ ಸಮಾರಂಭ ನಡೆದಾಗ ಏಳು ಇಲಾಖೆಗಳು ಮದುವೆ ಸಂಬಂಧಿತ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದವು. ಬಂಧು-ಬಳಗ, ಮಿತ್ರರು, ಅಧಿಕಾರಿಗಳು ಹಾಗೂ ಗಣ್ಯಾತಿಗಣ್ಯ ವ್ಯಕ್ತಿಗಳಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡುವುದು ಅಂದಿನಿಂದ ಪರಂಪರಾಗತವಾಗಿ ಮುಂದುವರಿದುಕೊಂಡು ಬಂದಿದೆ.

ಇಂದು ಕೂಡ ಅದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವ  ಒಡೆಯರ್ ಮನೆತನ ಅತಿಗಣ್ಯರಿಗೆ ಆಹ್ವಾನ ನೀಡಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಅಮೆರಿಕಾ, ಸ್ವಿಟ್ಜರ್ ಲ್ಯಾಂಡ್ ಮತ್ತು ಫ್ರಾನ್ಸ್ ರಾಯಭಾರಿಗಳಿಗೂ ಸಹ ವಿವಾಹದ ಆಮಂತ್ರಣ ನೀಡಲಾಗಿದೆ.

ಒಡೆಯರ್ ಮನೆತನ ಮತ್ತು ರಾಜಸ್ತಾನದ ನಂಟು

ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಾಪ ರುದ್ರ ಕುಮಾರಿ ಅವರನ್ನು ವಿವಾಹವಾಗಿದ್ದರು, ಜಯಚಾಮರಾಜ ಒಡೆಯರ್ ಸತ್ಯಪ್ರೇಮ ಕುಮಾರಿ ಅವರನ್ನ ವಿವಾಹವಾಗಿದ್ದರು, ಈ ಇಬ್ಬರು ರಾಜ ಕುಮಾರಿಯರು ರಾಜಸ್ತಾನದ ದುಂಗಾರ್ಪುರ್ ರಾಜಮನೆತನದವರೇ ಆಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT