ರಾಜ್ಯ

ಜ್ಞಾನ ಭಾರತಿ ಕ್ಯಾಂಪಸ್ ಗೆ ಮತ್ತಷ್ಟು ಸಿಸಿಟಿವಿ ಕ್ಯಾಮೆರಾ: ಪೊಲೀಸರ ಪ್ರಸ್ತಾವನೆ

Shilpa D

ಬೆಂಗಳೂರು: ಬೆಂಗಳೂರು ವಿವಿಯ ಜ್ಞಾನ ಭಾರತಿ ಕ್ಯಾಂಪಸ್ ಗೆ ಮತ್ತಷ್ಟು ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಪೊಲೀಸರು ವಿವಿ ಆಡಳಿತ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಕ್ಯಾಂಪಸ್ ನಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ  ಜ್ಞಾನ ಭಾರತಿ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ಸಂಖ್ಯೆ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಯಾವ್ಯಾವ ಪ್ರದೇಶದಲ್ಲಿ ಕ್ಯಾಮೆರಾ ಅಳವಡಿಸಬೇಕು ಎಂದು ಪೊಲೀಸರು ಸ್ಥಳ ಗೊತ್ತು ಮಾಡಿದ್ದು, ಹೆಚ್ಚಿಗೆ 7 ಸಿಸಿಟಿವಿ ಕ್ಯಾಮೆರಾ ಬೇಕೆಂದು ಪೊಲೀಸರು ಬೇಡಿಕೆಯಿಟ್ಟಿದ್ದಾರೆ.

ಈಗಾಗಲೇ ಜ್ಞಾನ ಭಾರತಿ ಕ್ಯಾಂಪಸ್ ನಲ್ಲಿ 8 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಮತ್ತಷ್ಟು ಕ್ಯಾಮೆರಾಗಳಿಗಾಗಿ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದಾರೆ.

ವಿವಿ ಪ್ರಾಧಿಕಾರ ಇನ್ನೂ ಈ ಸಂಬಂಧ ನಿರ್ಧಾರ ಕೈಗೊಂಡಿಲ್ಲ, ಪೊಲೀಸರು ಸಲ್ಲಿಸಿರುವ ಪ್ರಸ್ತಾವನೆಯನ್ನು ತಜ್ಞರ ಸಮಿತಿ ಮುಂದೆ ಇಡಲಾಗುವುದು, ಎಂಸಿಎ ವಿಭಾಗದ ಡಾ.ಮುರುಳೀಧರ್ ನೇತೃತ್ವದ ಈ ಸಮಿತಿ ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿವಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2012 ರಲ್ಲಿ ಜ್ಞಾನ ಭಾರತಿ ಕ್ಯಾಂಪಸ್ ನಲ್ಲಿ ನಡೆದ ನ್ಯಾಷನಲ್ ಸ್ಕೂಲ್ ಇಂಡಿಯಾ ಯೂನಿವರ್ಸಿಟಿ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ನಂತರ ಸಿಸಿಟಿವಿ ಅಳವಡಿಸುವ ನಿರ್ಧಾರ ಕೈಗೊಂಡಿತ್ತು. ಅದರಂತೆ
ಸಿಸಿಟಿವಿ ಅಳವಡಿಸಲಾಗಿತ್ತು. ಈಗ ಮತ್ತಷ್ಟು ಸಿಸಿಟಿವಿ ಅಳವಡಿಲುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ಬೆಂಗಳೂರು ವಿವಿ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ  ಹಾಗೂ ಸಿಸಿಟಿವಿ ಅಳವಡಿಸುವ ಸ್ಥಳಗಳ ಗುರುತಿಸುವುದು ಕಷ್ಟವಾದ ಸಮಸ್ಯೆಯಾಗಿದೆ. 2015-16 ನೇ ಸಾಲಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ವಿವಿ 10 ಲಕ್ಷ ರು. ಹಣ ಖರ್ಚು ಮಾಡಿ 8 ಕ್ಯಾಮೆರಾ ಅಳವಡಿಸಿತ್ತು. ಈಗ ಮತ್ತೆ ಪೊಲೀಸರು ದುಬಾರಿ ಬೆಲೆಯ ಕ್ಯಾಮೆರಾಗಳನ್ನು ಕೇಳಿದ್ದಾರೆ.ಹೀಗಾಗಿ ಉನ್ನತ ಮಟ್ಟದಲ್ಲಿ ಇದು ನಿರ್ಧಾರ ವಾಗಬೇಕು ಎಂದು ಅವರು ತಿಳಿಸಿದ್ದಾರೆ.

SCROLL FOR NEXT