ರಾಜ್ಯ

'ನೈಸ್' ಆಗಿ ಉಳಿಯದ ನೈಸ್ ರಸ್ತೆ

Sumana Upadhyaya

ಬೆಂಗಳೂರು: ನೈಸ್ ರಸ್ತೆಯಲ್ಲಿ ಸಂಚರಿಸುವವರ ಪ್ರಯಾಣ ಅನುಭವ ಕೇಳಿದರೆ ಚೆನ್ನಾಗಿಲ್ಲ ಎಂದು ಹೇಳುವವರೇ ಅಧಿಕ ಮಂದಿ. ಇತ್ತೀಚೆಗೆ ಸಾರ್ವಜನಿಕ ಕಾಮಗಾರಿ ಇಲಾಖೆ ನಡೆಸಿದ ಸಮೀಕ್ಷೆಯಿಂದ ಕಾರಣ ತಿಳಿದುಬಂದಿದೆ. ನಂದಿ ಮೂಲಭೂತ ಕಾರಿಡಾರ್ ಎಂಟರ್ ಪ್ರೈಸಸ್ ರಸ್ತೆ ಅಥವಾ ನೈಸ್ ರಸ್ತೆ ಭಾರತೀಯ ರಸ್ತೆ ಕಾಂಗ್ರೆಸ್ (ಐಆರ್ ಸಿ) ವಿಶೇಷಣಗಳನ್ನು ಹೊಂದಿಲ್ಲ ಎಂದು ತಿಳಿದುಬರುತ್ತದೆ. ರಸ್ತೆಯ ಅಲ್ಲಲ್ಲಿ ದೊಡ್ಡ ಹೊಂಡ-ಗುಂಡಿಗಳಿದ್ದು, ಅಸಮ ವಿಸ್ತರಣೆ ಮತ್ತು ಮರು ರಸ್ತೆ ಕಾಮಗಾರಿ ಕೂಡ ಸರಿಯಾಗಿ ನಡೆದಿಲ್ಲ ಎಂದು ಸಮೀಕ್ಷೆ ಹೇಳುತ್ತದೆ.

50 ಕಿಲೋ ಮೀಟರ್ ಫೆರಿಫೆರಲ್ ರಿಂಗ್ ರಸ್ತೆಯನ್ನೊಳಗೊಂಡ ನೈಸ್ ರಸ್ತೆ 7 ಕಡೆಗಳಲ್ಲಿ ಟೋಲ್ ಬೂತ್ ಗಳನ್ನು ಹೊಂದಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುವವರಿಗೆ ಈ ರಸ್ತೆ ಸಮಯವನ್ನು ಉಳಿತಾಯ ಮಾಡುತ್ತದೆ.

ಭಾರತದಲ್ಲಿಯೇ ಅತಿ ಹೆಚ್ಚು ಶುಲ್ಕ ಪಡೆಯುತ್ತಿರುವ ನೈಸ್ ರಸ್ತೆಯನ್ನು ಗುಣಮಟ್ಟದ ವಿಚಾರದಲ್ಲಿ ಸರಿಯಾಗಿ ನಿರ್ವಹಿಸಿಲ್ಲ ಎನ್ನುತ್ತದೆ ಸಮೀಕ್ಷೆ.

ಸುಮಾರು ಮೂರೂವರೆ ಕೋಟಿ ರೂಪಾಯಿ ವೆಚ್ಚದ ರಸ್ತೆ ಸ್ಥಿತಿ ಅಂಕಿಅಂಶ ಸಂಗ್ರಹ ವಾಹನ ಲೇಸರ್ ತಂತ್ರಜ್ಞಾನವನ್ನು ಹೊಂದಿದ ಸಾಧನಗಳನ್ನು ಒಳಗೊಂಡಿದೆ. ಇದರಿಂದ ರಸ್ತೆಯಲ್ಲಿ ಏನು ಲೋಪದೋಷಗಳಿವೆ, ಗುಣಮಟ್ಟ ಹೇಗಿದೆ ಎಂಬುದನ್ನು ಪರಿಶೀಲಿಸಲಾಗುತ್ತದೆ.

ನೈಸ್  ಸಂಸ್ಥೆ ಪ್ರಯಾಣಿಕರಿಂದ ಅಧಿಕ ಶುಲ್ಕ ವಸೂಲಿ ಮಾಡುತ್ತಿದ್ದರೂ ಸಹ ಗುಣಮಟ್ಟವನ್ನು ಕಾಯ್ದುಕೊಂಡಿಲ್ಲ.ಪ್ರತಿ ಮೂರು ವರ್ಷಕ್ಕೊಮ್ಮೆ ರಸ್ತ ದುರಸ್ತಿ ಮಾಡಬೇಕೆಂಬ ನಿಯಮವಿದೆ. ಹಾಗಾಗಿ ಪ್ರಯಾಣಿಕರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ ಎನ್ನುತ್ತಾರೆ ಟ್ರಾಫಿಕ್ ತಜ್ಞ ಪ್ರೊ.ಎಂ.ಎನ್.ಶ್ರೀಹರಿ.

ನೈಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿಯವರನ್ನು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಸಂಪರ್ಕಿಸಿದಾಗ, ತಮಗೆ ಪಿಡಬ್ಲ್ಯುಡಿ ಇಲಾಖೆಯ ಸಮೀಕ್ಷೆ ಬಗ್ಗೆ ಅರಿವಿಲ್ಲ ಎಂದರು. ಸಮೀಕ್ಷೆ ನಡೆಸುವಾಗ ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ. ನನಗೆ ವರದಿಯನ್ನೂ ಕೊಟ್ಟಿಲ್ಲ. ಸಮೀಕ್ಷೆಯ ನಿಖರತೆಯನ್ನು ನಾನು ಹೇಗೆ ನಂಬಲು ಸಾಧ್ಯ? ಎಂದು ಕೇಳಿದರು. ನಾವು ಮತ್ತೆ ರಸ್ತೆಗೆ ಜಲ್ಲಿ, ಟಾರನ್ನು ಹಾಕುತ್ತಿದ್ದು, ಅರ್ಧದಷ್ಟು ಕಾಮಗಾರಿ ಮುಗಿದಿದೆ ಎಂದು ಹೇಳಿದರು.

SCROLL FOR NEXT