ರಾಜ್ಯ

ಯೋಧರ ದೇಶಪ್ರೇಮದ ಬಗ್ಗೆ ವಿವಾದಾತ್ಮಕ ಹೇಳಿಕೆ: ಸಿಎಂ ಮಾಧ್ಯಮ ಸಲಹೆಗಾರರ ವಿರುದ್ಧ ತನಿಖೆ

Srinivas Rao BV

ಬೆಂಗಳೂರು: ಸೈನಿಕರ ದೇಶಪ್ರೇಮದ ಬಗ್ಗೆ ಅನುಚಿತ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅವರ ವಿರುದ್ಧ ತನಿಖೆ ನಡೆಸಲಾಗುವುದು ಸಚಿವ ಎಸ್ ಆರ್ ಪಾಟಿಲ್ ಭರವಸೆ ನೀಡಿದ್ದಾರೆ.
ಸೈನಿಕರು ಸೇನೆಗೆ ಸೇರುವುದು ದೇಶಪ್ರೇಮದಿಂದ ಅಲ್ಲ ಬಡತನದಿಂದಾಗಿ ಎಂದು ದಿನೇಶ್ ಅಮಿನ್ ಮಟ್ಟು ಕಾರ್ಯಕ್ರಮವೊಂದರಲ್ಲಿ ಅನುಚಿತ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದಕ್ಕೀಡಾಗಿ ಸಾಮಾಜಿಕ ಜಾಲತಾಣಗಳಲ್ಲಿ ದಿನೇಶ್ ಅಮಿನ್ ಮಟ್ಟು ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. 

ವಿಧಾನ ಪರಿಷತ್ ನ ಬಿಜೆಪಿ ಸದಸ್ಯ  ಕ್ಯಾ. ಗಣೇಶ್ ಕಾರ್ಣೀಕ್  ಯೋಧರ ಬಗ್ಗೆ ದಿನೇಶ್ ಅಮಿನ್ ಮಟ್ಟು ಅವರ ವಿವಾದಾತ್ಮಕ ಹೇಳಿಕೆಯನ್ನು ಪ್ರಸ್ತಾಪಿಸುತ್ತಿದ್ದಂತೆಯೇ ಸಿಎಂ ಮಾಧ್ಯಮ ಸಲಹೆಗಾರರ ವಿರುದ್ಧ ಸದನದಲ್ಲಿ ಪ್ರತಿಪಕ್ಷ ಸದಸ್ಯರಿಂದ ಆಕ್ರೋಶ ವ್ಯಕ್ತವಾಯಿತು. ತಕ್ಷಣವೇ ಮುಖ್ಯಮಂತ್ರಿಗಳು ತಮ್ಮ ಸಲಹೆಗಾರರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರತಿಪಕ್ಷ ಸದಸ್ಯರಿಗೆ ಉತ್ತರಿಸಿದ ವಿಧಾನಪರಿಷತ್ ಸಭಾ ನಾಯಕ ಎಸ್ ಆರ್ ಪಾಟೀಲ್, ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರರ ಹೇಳಿಕೆ ಬಗ್ಗೆ ತನಿಖೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ. 

SCROLL FOR NEXT