ಬೆಂಗಳೂರು: ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ನಾಳೆ ಆರಂಭವಾಗಲಿದೆ. ರಾಜ್ಯದ ಸಾವಿರದ 32 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಈ ವರ್ಷ ಒಟ್ಟು 6 ಲಕ್ಷದ 40 ಸಾವಿರದ 333 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅವರಲ್ಲಿ 3 ಲಕ್ಷದ 29 ಸಾವಿರದ 187 ಮಂದಿ ಹುಡುಗರು ಮತ್ತು 3 ಲಕ್ಷದ 10 ಸಾವಿರದ 846 ಮಂದಿ ಹುಡುಗಿಯರಿದ್ದಾರೆ.
ಪರೀಕ್ಷೆ ನಡೆಯುವ ಕೇಂದ್ರಗಳಲ್ಲಿ 206 ಕೇಂದ್ರಗಳನ್ನು ಸೂಕ್ಷ್ಮ ಮತ್ತು 72 ಕೇಂದ್ರಗಳನ್ನು ಅತಿಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.