ರಾಜ್ಯ

ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗಿದ್ದ ಎಎಸ್ ಐ ಸಸ್ಪೆಂಡ್

Mainashree
ಬೆಂಗಳೂರು: ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗಿದ್ದ ಕಲಾಸಿಪಾಳ್ಯದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ.
58 ವರ್ಷದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಸನ್ನ ಶೆಟ್ಟಿ ಕಂಠಪೂರ್ತಿ ಪಾನ ಮತ್ತನಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದನ್ನು ಗಮನಿಸಿದ ಹಿರಿಯ ಅಧಿಕಾರಿಗಳು, ಪಾನಮತ್ತನಾಗಿ ಕಚೇರಿಗೆ ಬಂದಿರುವುದಾಗಿ ತಿಳಿಸಿದ್ದು, ಬುದ್ಧಿವಾದ ಹೇಳಿದ್ದಾರೆ.
ಇದಕ್ಕೆ ಕುಪಿತರಾದ ಸಹಾಯಕ ಸಬ್ ಇನ್ಸ್ ಪೆಕ್ಟರ್, ಹಿರಿಯ ಅಧಿಕಾರಿಗಳನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ. ಈ ವಿಷಯವನ್ನು ಅಧಿಕಾರಿಗಳು ಮೇಲಾಧಿರಿಗಳ ಗಮನಕ್ಕೆ ತಂದಿದ್ದು, ಸನ್ನ ಶೆಟ್ಟಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
SCROLL FOR NEXT