ರಾಜ್ಯ

ಕೊಪ್ಪಳ ನಗರ ಸಭೆ ಜೆಡಿಎಸ್ ಸದಸ್ಯನಿಂದ ಮಹಿಳಾ ಸದಸ್ಯೆ ಮೇಲೆ ಹಲ್ಲೆ

Lingaraj Badiger
ಕೊಪ್ಪಳ: ಕಪ್ಪಳ ನಗರ ಪಾಲಿಕೆ ಸದಸ್ಯನೊಬ್ಬ ಸಭೆ ನಡೆಯುತ್ತಿದ್ದ ವೇಳೆ ಎಲ್ಲರ ಎದುರೇ ಮಹಿಳಾ ಸದಸ್ಯರೊಬ್ಬರ ಮೇಲೆ ಏಕಾಏಕಿ ಹಲ್ಯೆ ನಡೆಸಿದ ಘಟನೆ ಶನಿವಾರ ನಡೆದಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಗೆ ಬೆಂಬಲ ನೀಡಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಸದಸ್ಯ ಚೆನ್ನಪ್ಪ ಕೋಟಿಹಾಳ್ ಅವರು ತುಂಬಿದ ಸಭೆಯಲ್ಲೇ ಎಲ್ಲರ ಎದುರೇ ಪಕ್ಷೇತರ ಸದಸ್ಯೆ ವಿಜಯ ಹಿರೇಮಠ ಅವರಿಗೆ ಕಪಾಳಮೋಕ್ಷ ಮಾಡಿದರು. ಇದಕ್ಕೆ ಪ್ರತಿಯಾಗಿ ವಿಜಯಾ ಅವರು ಸಹ ಚೆನ್ನಪ್ಪನ ಮೇಲೆ ಕೈಮಾಡಿದರು
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಹಲ್ಲೆಗೊಳಗಾದ ವಿಜಯಾ ಅವರು, ನಾನು ಬಿಜೆಪಿ ಪರ ಮತ ಹಾಕುತ್ತೇನೆ ಎಂದು ಹೇಳಿರಲಿಲ್ಲ. ಆದರೂ ತುಂಬಿದ ಸಭೆಯಲ್ಲಿ ಏಕಾಏಕಿ ನನ್ನ ಮೇಲೆ ಕೈ ಮಾಡಿದರು ಎಂದು ಹೇಳಿದ್ದಾರೆ.
ಸದಸ್ಯನ ಗೂಂಡಾಗಿರಿ ವಿರುದ್ಧ ವಿಜಯಾ ಹಿರೇಮಠ್ ಅವರು ಪೊಲೀಸರಿಗೆ ದೂರು ನೀಡಿದ್ದು, ಕೂಡಲೇ ಚೆನ್ನಪ್ಪನನ್ನು ಬಂಧಿಸಬೇಕು ಒತ್ತಾಯಿಸಿರುವುದಾಗಿ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ತಿಳಿಸಿದ್ದಾರೆ.
ಜೆಡಿಎಸ್ ಸದಸ್ಯನ ವರ್ತನೆ ನಿಜಕ್ಕೂ ಖಂಡನೀಯವಾಗಿದ್ದು, ಘಟನೆ ನಂತರ ನಾನು ಕೂಡಲೇ ಜೆಡಿಎಸ್ ಸದಸ್ಯನನ್ನು ಹೊರಹಾಕಲು ಸೂಚಿಸಿದ್ದೆ, ಯಾರೇ ಆಗಲಿ ಇಂಥ ಘಟನೆಗಳನ್ನು ಪ್ರೋತ್ಸಾಹಿಸಬಾರದು. ಹಲ್ಲೆ ನಡೆಸಿದ ಸದಸ್ಯನ ವಿರುದ್ಧ ಜೆಡಿಎಸ್ ಕ್ರಮ ಕೈಗೊಳ್ಳಬೇಕು ಮತ್ತು ಈ ಕೂಡಲೇ ಆತನನ್ನು ಬಂಧಿಸಬೇಕು ಎಂದು ಹಿಟ್ನಾಳ್ ಒತ್ತಾಯಿಸಿದ್ದಾರೆ.
SCROLL FOR NEXT