ರಾಜ್ಯ

ವಿದ್ಯುತ್ ಕಡಿತದಿಂದ ನೀರಿನ ಕೊರತೆ: ಬೆಂಗಳೂರು ಜಲಮಂಡಳಿ

Srinivas Rao BV
ಬೆಂಗಳೂರು: ಸದ್ಯದಲ್ಲೇ ಬೆಂಗಳೂರಿಗೆ ನೀರಿನ ಕೊರತೆ ಎದುರಾಗಲಿದೆ ಎಂಬ ಒಂದು ವಾರದ ಅಹಿಂದೆಯೇ ಅಂದಾಜಿಸಲಾಗಿತ್ತು. ಆದರೆ ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಸಂಗ್ರಹದ ಇಲ್ಲದಿರುವುದರಿಂದ ನೀರಿನ ಕೊರತೆ ಎದುರಾಗುವುದಿಲ್ಲ  ಎಂಬ ಬೆಂಗಳೂರು ಜಲಮಂಡಳಿ ಸ್ಪಷ್ಟನೆಯ ಹೊರತಾಗಿಯೂ ನಗರದಲ್ಲಿ  ನೀರಿನ ಕೊರತೆ ಎದುರಾಗಿದೆ. 
ನೀರಿನ ಕೊರತೆ ಎದುರಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಜಲಮಂಡಳಿ ಅಧ್ಯಕ್ಷ ವಿಜಯ್ ಭಾಸ್ಕರ್, ವಿದ್ಯುತ್ ಕೊರತೆಯಿಂದ ನೀರಿನ ಪೂರೈಕೆಗೆ ಅಡ್ಡಿ ಉಂಟಾಗಿದೆ ಎಂದು ಹೇಳಿದ್ದಾರೆ. ವಿದ್ಯುತ್ ಪೂರೈಕೆ ಕೊರತೆಯಿಂದ ನೀರಿನ ಪೂರೈಕೆಗೂ ಕೆಲವು ಪ್ರದೇಶಗಳಲ್ಲಿ ಅಡ್ಡಿ ಉಂಟಾಗಿದೆ, ನಗರದ ನೀರುಪೂರೈಕೆಯ ಶೇ.3 ರಷ್ಟು ಮಾತ್ರ ಪರಿಣಾಮ ಎದುರಿಸಿದೆ ಎಂದು ತಿಳಿಸಿದ್ದಾರೆ. 
ಕೆಆರ್ ಎಸ್ ಜಲಾಶಯದಲ್ಲಿ ಪ್ರಸ್ತುತ 84 ಅಡಿ ನೀರಿದೆ. ಬೆಂಗಳೂರು, ಮೈಸೂರು, ಮಂಡ್ಯ ಹಾಗು ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲು 75 ಅಡಿ ನೀರಿದ್ದರೆ ಸಾಕು ಎನ್ನುತ್ತಾರೆ ಬೆಂಗಳೂರು ಜಲಮಂಡಳಿಯ ಮುಖ್ಯ ಇಂಜಿನಿಯರ್ ಎಸ್ ಕೃಷ್ಣಪ್ಪ. 
ಬಸವೇಶ್ವರ ನಗರ, ಕಮಲಾ ನಗರ, ರಾಜಾಜಿನಗರದ ಕೆಲವು ಪ್ರದೇಶಗಳು, ಮಹಾಲಕ್ಷ್ಮಿ ಲೇಔಟ್, ವಿಜಯನಗರ, ನಾಗರಬಾವಿ, ಕೆಂಗೇರಿಯ ಕೆಲವು ಪ್ರದೇಶಗಳು ನೀರಿನ ಕೊರತೆ ಎದುರಿಸುತ್ತಿವೆ. 
SCROLL FOR NEXT