ಪೊಲೀಸ್ ಇಲಾಖೆಯ ಸಹಾಯವಾಣಿ 100ಕ್ಕೆ ಚಾಲನೆ ನೀಡಿದ ಗೃಹ ಸಚಿವ ಪರಮೇಶ್ವರ(ಟಿಎನ್ಐಇ ಚಿತ್ರ) 
ರಾಜ್ಯ

ಅಪ್ ಗ್ರೇಡ್ ಆದ 100, ದೂರಿಗೆ ಕ್ಷಣಾರ್ಧದಲ್ಲಿ ಪೊಲೀಸ್ ಸ್ಪಂದನೆ

ಬೆಂಗಳೂರು ಪೊಲೀಸ್ ಸಹಾಯವಾಣಿ ಅಪ್ ಗ್ರೇಡ್ ಆಗಿದ್ದು, ಸಹಾಯವಾಣಿಗೆ ಹೆಚ್ಚುವರಿ ಸಿಬ್ಬಂದಿ ಮತ್ತು ತಂತ್ರಜ್ಞಾನದ ಟಚ್ ನೀಡುವ ಮೂಲಕ ಇಲಾಖೆಯನ್ನು ಅಪ್ ಗ್ರೇಡ್ ಮಾಡಲಾಗಿದೆ.

ಬೆಂಗಳೂರು: ಬೆಂಗಳೂರು ಪೊಲೀಸ್ ಸಹಾಯವಾಣಿ ಅಪ್ ಗ್ರೇಡ್ ಆಗಿದ್ದು, ಸಹಾಯವಾಣಿಗೆ ಹೆಚ್ಚುವರಿ ಸಿಬ್ಬಂದಿ ಮತ್ತು ತಂತ್ರಜ್ಞಾನದ ಟಚ್ ನೀಡುವ ಮೂಲಕ ಇಲಾಖೆಯನ್ನು ಅಪ್ ಗ್ರೇಡ್  ಮಾಡಲಾಗಿದೆ.

ಎಲ್ಲ ಮುಗಿದ ಮೇಲೆ ಪೊಲೀಸ್ ಬಂದ್ರು ಎಂಬ ಮಾತು ಇನ್ನು ಮೂಲೆಗುಂಪಾಗಲಿದ್ದು, ದುರ್ಘಟನೆ ನಡೆಯುವ ಮುನ್ನವೇ ನಮ್ಮ ಬೆಂಗಳೂರು ಪೊಲೀಸರು ಸ್ಥಳಕ್ಕೆ ಹಾಜರಾಗುತ್ತಾರೆ. ಏಕೆಂದರೆ  ಬೆಂಗಳೂರು ಪೊಲೀಸ್ ಸಹಾಯವಾಣಿ 100ಕ್ಕೆ ಆಧುನಿಕ ಮತ್ತು ತಂತ್ರಜ್ಞಾನದ ಟಚ್ ನೀಡಲಾಗಿದ್ದು, ಕರೆ ಮಾಡಿದ ದೂರಿಗೆ ತುರ್ತಾಗಿ ಪ್ರತಿಕ್ರಿಯಿಸಲು ಪೊಲೀಸರು ಸಜ್ಜಾಗಿದ್ದಾರೆ. ಇದಕ್ಕಾಗಿ  ಗೃಹಸಚಿವಾಲಯ ಸಹಾಯವಾಣಿಗೆ ತಂತ್ರಜ್ಞಾನದ ಟಚ್ ನೀಡಿದ್ದು, ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

ಅಲ್ಲದೆ ಸಹಾಯವಾಣಿಗೆ 16 ಮಂದಿ ದೂರವಾಣಿ ನಿರ್ವಾಹಕರು, ನಾಲ್ಕು ಮಂದಿ ರವಾನೆದಾರರನ್ನು ಹೆಚ್ಚುವರಿಯಾಗಿ ನೇಮಿಸಿಕೊಂಡಿದ್ದು, ದೂರು ಬಂದ ಮರು ಕ್ಷಣ ಸಂಬಂಧ ಪಟ್ಟ  ಅಧಿಕಾರಿಗಳಿಗೆ ಇವರು ಮಾಹಿತಿ ರವಾನೆ ಮಾಡುತ್ತಾರೆ. ದೂರುದಾರರು ಸಹಾಯವಾಣಿಗೆ ಲ್ಯಾಂಡ್ ಲೈನ್, ಮೊಬೈಲ್, ಎಸ್ ಎಂಎಸ್ ಮತ್ತು ಸಾಮಾಜಿಕ ಜಾಲತಾಣ ಹೀಗೆ ಯಾವುದೇ  ಮೂಲದಿಂದ ದೂರು ಅಥವಾ ಸಂದೇಶ ರವಾನಿಸಿದರೆ, ಕೂಡಲೇ ಆ ಸಂದೇಶ ಮತ್ತು ದೂರುಗಳನ್ನು ಸಹಾಯವಾಣಿಯ ಸಿಬ್ಬಂದಿಗಳು ಸಂಬಂಧ ಪೊಲೀಸ್ ಠಾಣೆ ಮತ್ತು ಪೊಲೀಸರಿಗೆ  ಮುಟ್ಟಿಸುತ್ತಾರೆ.

ಕೇವಲ ದೂರು ಸ್ವೀಕರಿಸುವುದಷ್ಟೇ ಅಲ್ಲ, ದೂರಿನ ಸಂಬಂಧ ಪೊಲೀಸರು ತೆಗೆದುಕೊಂಡ ಕ್ರಮ ಹಾಗೂ ದೂರಿನ ಸ್ಥಿತಿಗತಿ ವಿವರವನ್ನು ದೂರುದಾರರಿಗೆ ಎಸ್ ಎಂಎಸ್ ಮತ್ತು ಇ-ಮೇಲ್  ಮೂಲಕ ರವಾನೆ ಮಾಡಲಾಗುತ್ತದೆ. ಅಲ್ಲದೆ ದೂರು ನೀಡಿದ ಸಂಬಂಧ ಪೊಲೀಸರಿಂದ ದೊರೆಯುವ ಸ್ವೀಕೃತಿ ಪತ್ರ ಕೂಡ ಇನ್ನು ಎಸ್ ಎಂಎಸ್ ಮತ್ತು ಇ-ಮೇಲ್ ನಲ್ಲೇ ರವಾನೆ  ಮಾಡಲಾಗುತ್ತದೆ. ಇನ್ನು ಪೊಲೀಸ್ ವೀಕ್ಷಣ ವಾಹನಗಳಾದ ಹೊಯ್ಸಳಕ್ಕೆ MDT (Mobile Data Terminal) ಅಳವಡಿಸಿದ್ದು, ಇದರ ಮೂಲಕವಾಗಿ ಸಂಬಂಧ ಪೊಲೀಸರು ದೂರಿನ  ಸ್ಥಿತಿಗತಿ ಅಪ್ ಡೇಟ್ ಮಾಡುತ್ತಾರೆ. ಇದು ದೂರುದಾರರಿಗೆ ಆನ್ ಲೈನ್ ಮೂಲಕ ತಲುಪುತ್ತದೆ.

ಇಂತಹ ಆಧುನಿಕ ವ್ಯವಸ್ಥೆಗೆ ಗೃಹ ಸಚಿವ ಪರಮೇಶ್ವರ ಅವರು ಸೋಮವಾರ ಚಾಲನೆ ನೀಡಿದ್ದು, ಅಪ್ ಗ್ರೇಡೆಡ್ ಸಹಾಯವಾಣಿ ಈಗಾಗಗಲೇ ಕಾರ್ಯನಿರತವಾಗಿದೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ ಅಪ್ ಗ್ರೇಡೆಡ್ ಸಹಾಯವಾಣಿ?
ದೂರುದಾದರರು ಪೊಲೀಸ್ ಸಹಾಯವಾಣಿಗೆ ವಿವಿಧ ಮೂಲಗಳಿಂದ ದೂರು ನೀಡಬಹುದು. ಲ್ಯಾಂಡ್ ಲೈನ್, ಮೊಬೈಲ್, ಇ-ಮೇಲ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ದೂರು  ನೀಡಬಹುದಾಗಿದೆ.

ಹೀಗೆ ಬಂದ ದೂರುಗಳನ್ನು ಸ್ವೀಕರಿಸಿದ ಸಹಾಯವಾಣಿಯ ಸಿಬ್ಬಂದಿಗಳು ಕೂಡಲೇ ಅದನ್ನು ಸಂಬಂಧ ಪಟ್ಟ ಅಧಿಕಾರಿಗಳ ಅಥವಾ ಸಮೀಪದ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿರುವ ಪೊಲೀಸ್  ವಾಹನಗಳ ಗಮನಕ್ಕೆ ತರುತ್ತಾರೆ.

ದೂರುದಾರರು ದೂರು ನೀಡಿದ ಸಂಬಂಧ ಎಸ್ ಎಂಎಸ್ ಮೂಲಕ ದೂರು ಸ್ವೀಕೃತಿ ಪಡೆಯಲಿದ್ದು, ಆನ್ ಲೈನ್ ನಲ್ಲಿ ತಮ್ಮ ದೂರಿನ ಸ್ಥಿತಿಗತಿಯನ್ನು ಕೂಡ ದೂರುದಾರರು  ಪರಿಶೀಲಿಸಬಹುದಾಗಿದೆ.

ಇನ್ನು ಹೊಯ್ಸಳ ವಾಹನಕ್ಕೆ ಅಳವಡಿಸಲಾಗಿರುವ ಎಂಡಿಟಿ ನೆರವಿನಿಂದ ಪೊಲೀಸರು ದೂರಿನ ಸಂಬಂಧ ತನಿಖೆ ನಡೆಸಿ ಅದರ ಸ್ಥಿತಿಗತಿಯನ್ನು ಆಗ್ಗಾಗ್ಗೆ ಅಪ್ ಡೇಟ್ ಮಾಡುತ್ತಿರುತ್ತಾರೆ.  ಆಡಿಯೋ ಮತ್ತು ವಿಡಿಯೋ ಮೂಲಕ ಪೊಲೀಸರು ನಿಯಂತ್ರಣ ಕೊಠಡಿಗೆ ಮಾಹಿತಿ ಸಲ್ಲಿಸುತ್ತಿರುತ್ತಾರೆ. ಇದರ ಮಾಹಿತಿಯನ್ನು ಸಂಬಂಧ ಪಟ್ಟ ದೂರುದಾರರು ಆನ್ ಲೈನ್ ಮೂಲಕ ಪಡೆಯಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!