ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬುದ್ಧಿಮಾಂದ್ಯ ಮಹಿಳೆ

ಬುದ್ಧಿಮಾಂದ್ಯ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರದಲ್ಲಿ...

ಬೆಂಗಳೂರು: ಬುದ್ಧಿಮಾಂದ್ಯ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರದಲ್ಲಿ ನಿನ್ನೆ ನಡೆದಿದೆ. 
47 ವರ್ಷದ ಕಮಲಮ್ಮ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ 13 ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿದ್ದು, ಪತಿ ನಾರಾಣಪ್ಪ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸವಾಗಿದ್ದರು. 
ಕಳೆದ ಎರಡು ತಿಂಗಳ ಹಿಂದೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆ ತರಲಾಗಿತ್ತು. ಬುಧವಾರ ಬೆಳಗ್ಗೆ 6.39ರ ಸುಮಾರಿಗೆ ಮನೆಯವರೆಲ್ಲ ಮಲಗಿದ್ದ ವೇಳೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 
ಮೊದಲ ಮಗಳಿಗೆ ಮದುವೆ ಮಾಡಿದ್ದ ನಾರಾಣಪ್ಪ, ಕಿರಿಯ ಪುತ್ರಿ ಮತ್ತು ಪತ್ನಿ ಕಮಲಮ್ಮಳೊಂದಿಗೆ ವಾಸವಾಗಿದ್ದರು. ಈ ಹಿಂದೆ ಕಮಲಮ್ಮ ಮನೆಯಿಂದ ಎರಡು ಬಾರಿ ಓಡಿ ಹೋಗಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್-ಅಮೆರಿಕವನ್ನ ಕ್ಷಮಿಸೋ ಮಾತೇ ಇಲ್ಲ.. ಆದರೆ...': ನೆರೆಹೊರೆ ರಾಷ್ಟ್ರಗಳ ಕ್ಷಮೆ ಕೋರಿದ Iran

ರಾಹುಲ್ ಗಾಂಧಿ ರಾಜಕೀಯಕ್ಕೆ ಬರದಿದ್ದರೆ ಏನು ಮಾಡುತ್ತಿದ್ದರು ಗೊತ್ತಾ? ಇಲ್ಲಿದೆ ಅಚ್ಚರಿಯ ಉತ್ತರ

ಕೊಚ್ಚಿಯ ಬಂದರಿನಲ್ಲಿ ಇರಾನಿನ ನೌಕಾ ಹಡಗು ನಿಲ್ಲಿಸಲು ಅನುಮತಿ: ಎಸ್. ಜೈಶಂಕರ್ ಹೇಳಿದ್ದು ಏನು?

T20 ವಿಶ್ವಕಪ್ 2026: ಸತತ 2ನೇ ಬಾರಿಗೆ ಫೈನಲ್, ಅಪರೂಪದ ದಾಖಲೆ ಬರೆದ ಭಾರತ, ಎಲೈಟ್ ಗ್ರೂಪ್ ಸೇರ್ಪಡೆ!

US-Iran conflict: ಟೆಹ್ರಾನ್'ನಲ್ಲಿ ಭಾರೀ ಸ್ಫೋಟ, ಬಾಂಬ್ ದಾಳಿ ಮತ್ತಷ್ಟು ಹೆಚ್ಚಲಿದೆ ಎಂದು ಅಮೆರಿಕಾ ಎಚ್ಚರಿಕೆ

SCROLL FOR NEXT