ಚಿಕ್ಕಮಗಳೂರು: ಚಿಕ್ಕಮಗಳೂರಿನ ಚಿತ್ರಕಲಾ ಮಹಾ ವಿದ್ಯಾಲಯ ವಿದ್ಯಾರ್ಥಿಗಳು 15 ಅಡಿ ಅಗಲ, 20 ಅಡಿ ಎತ್ತರದ ವೀಣಾಪಾಣಿ ಸರಸ್ವತಿ ದೇವಿ ವಿಗ್ರಹವನ್ನು ತಯಾರಿಸಿದ್ದಾರೆ..
ಸುಮಾರು 800 ಕೆಜಿ ತೂಕವಿರುವ ಈ ವಿಗ್ರಹ ರಾಜ್ಯದಲ್ಲೇ ಅತಿ ದೊಡ್ಡ ಸರಸ್ವತಿ ವಿಗ್ರಹವಾಗಿದೆ. ಮ್ಯೂರಲ್ ಮಾದರಿಯ ವರ್ಣ ಚಿತ್ರ ಇದಾಗಿದೆ.
ಈ ವಿಗ್ರಹ ತಯಾರಿಸಲು ಎರಡು ಟ್ರ್ಯಾಕ್ಟರ್ ಜೇಡಿಮಣ್ಣು, ಪ್ಲಾಸ್ಟರ್ ಆಫ್ ಪ್ಯಾರಿಸ್, ಫೈಬರ್ ಗ್ಲಾಸ್ ಮುಂತಾದವುಗಳನ್ನು ಬಳಸಲಾಗಿದೆ. ಈ ವಿಗ್ರಹ ತಯಾರಿಸಲು ಸುಮಾರು ಎರಡೂವರೆ ತಿಂಗಳು ಸಮಯ ತೆಗೆದು ಕೊಳ್ಳಲಾಗಿದೆ.
ಈ ಬೃಹತ್ ಸರಸ್ವತಿ ವಿಗ್ರಹವನ್ನು ಮೈಸೂರಿನ ಎಕ್ಸೆಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಚಿತ್ರಕಲ್ ಮಹಾವಿದ್ಯಾಲಯದ ಪ್ರಾಂಶುಪಾಲ ವಿಶ್ವಕರ್ಮ ಆಚಾರ್ಯ ಹೇಳಿದ್ದಾರೆ.