ಬೆಂಗಳೂರು: ಲಾಂಗ್ ಡ್ರೈವ್ ನೆಪದಲ್ಲಿ ಯುವತಿಯೊಬ್ಬಳನ್ನು ಕರೆದೊಯ್ದು ಐವರ ಯುವಕರ ತಂಡ ಸಾಮೂಹಿಕ ಅತ್ಯಾಚಾರ ನಡೆಸಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಧ್ಯಪ್ರದೇಶದ 26 ವರ್ಷದ ಯುವತಿಯನ್ನು ಆ ಯುವತಿಯ ಸಹೋದರನ ಸ್ನೇಹಿತರೇ ಲಾಂಗ್ ಡ್ರೈವ್ ಹೋಗುವುದಾಗಿ ಹೇಳಿ ಕಾಫಿಶಾಪ್ ನಿಂದ ಕರೆದೊಯ್ದು ಆರ್ ಎಂಸಿ ಯಾರ್ಡ್ ಬಳಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಯುವತಿಗೆ 6 ಸಾವಿರ ರುಪಾಯಿ ನೀಡಿ, ವಿಷಯ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ.
ಅತ್ಯಾಚಾರ ಬಳಿಕ ಪ್ರಜ್ಞಾಹೀನಳಾಗಿದ್ದ ಯುವತಿ ನಗರದ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳಾದ ಕೃಷ್ಣಮೂರ್ತಿ, ಶಿವಕುಮಾರ್ ನನ್ನು ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಮೂವರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.