ವಿಜಯಪುರ: ಈಜಲು ಹೋದ ಮೂವರು ಬಾಲಕರು ನೀರು ಪಾಲಾದ ಘಟನೆ ಶನಿವಾರ ವಿಜಯಪುರ ತಾಲೂಕಿನ ಆಲಮೇಲದಲ್ಲಿ ನಡೆದಿದೆ.
ಆಲಮೇಲ ಪಟ್ಟಣಕ್ಕೆ ಸಮೀಪದಲ್ಲಿರುವ ಕೆರೆಯಲ್ಲಿ ಈಜಲು ಹೋಗಿದ್ದ ಸೈಫನ್ ಮೇಲಿನಮನಿ(10), ಗಾಲೀಬ್ ಲಾಲ್ಸಾಬ್ ಮೇಲಿನಮನಿ(12) ಮತ್ತು ಅಕ್ಬರ್ ಬಷೀರ್ ಮುಲ್ಲಾ (7) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಬಾಲಕರು ನೀರಿನಲ್ಲಿ ಮುಳುಗಿರುವ ಮಾಹಿತಿ ಪಡೆದು ಆಲಮೇಲ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವಗಳನ್ನು ಹೊರ ತೆಗೆದಿದ್ದಾರೆ.
ಈ ಸಂಬಂಧ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.