ಸುರೇಂದ್ರ ಕುಮಾರ್ 
ರಾಜ್ಯ

ಪೊಲೀಸರು, ರಾಜಕಾರಣಿಗಳು, ಉದ್ಯಮಿಗಳಿಗೆ 30 ಕೋಟಿ ರೂ. ಸಾಲ ನೀಡಿದ್ದ ಸುರೇಂದ್ರ ಕುಮಾರ್

ಸಂಜಯನಗರದಲ್ಲಿ ಕೊಲೆಯಾದ ಉದ್ಯಮಿ ಸುರೇಂದ್ರ ಕುಮಾರ್ ಪರಚೂರಿ ರಾಜಕಾರಣಿಗಳು, ಪೊಲೀಸರು ಹಾಗೂ ಹಲವು ಉದ್ಯಮಿಗಳಿಗೆ ಸುಮಾರು 30 ...

ಬೆಂಗಳೂರು: ಸಂಜಯನಗರದಲ್ಲಿ ಕೊಲೆಯಾದ ಉದ್ಯಮಿ ಸುರೇಂದ್ರ ಕುಮಾರ್ ಪರಚೂರಿ ರಾಜಕಾರಣಿಗಳು, ಪೊಲೀಸರು ಹಾಗೂ ಹಲವು ಉದ್ಯಮಿಗಳಿಗೆ ಸುಮಾರು 30 ಕೋಟಿ ರೂ ಹಣ ಸಾಲ ನೀಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ತಮಗೆ ಪರಿಚಯ ಇರುವವರಿಗೆ ಸುರೇಂದ್ರ ಕುಮಾರ್ ಕೈಸಾಲ ನೀಡುತ್ತಾ ಬಂದಿದ್ದರು. ಕೊಲವೊಮ್ಮೆ ತಮ್ಮಿಂದ ಸಾಲ ಪಡೆದವರು ಹಣ ಮರಳಲಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದರೇ ಅಂತವರ ಸಾಲ ಮನ್ನಾ ಮಾಡಿದ್ದರು ಎಂದು ಸುರೇಂದ್ರ ಸಂಬಂಧಿ ಕ್ಯಾಪ್ಟನ್ ಚೌಧುರಿ ಹೇಳಿದ್ದಾರೆ.

ಸುರೇಂದ್ರ ಕುಮಾರ್ ಕೊಲೆ ಸಂಬಂಧ 4 ತಂಡಗಳನ್ನು ರಚಿಸಿರುವ ಪೊಲೀಸರ ಒಂದು ತಂಡ ಗುಂಟೂರಿಗೆ ಹೋಗಿದ್ದರೆ, ಮತ್ತೊಂದು ತಂಡ ಮಥುರಾಗೆ  ತೆರಳಿದೆ. ಇನ್ನುಳಿದ ತಂಡಗಳು ನಗರದಲ್ಲೇ ಇರುವ ಮೃತರ  ಸ್ನೇಹಿತರು, ಸಂಬಂಧಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನೂ ಸುರೇಂದ್ರ ಕುಮಾರ್ ಹಣಕಾಸು ವ್ಯವಹಾರ ಮಾಡುತ್ತಿದ್ದುದ್ದರಿಂದ ಪ್ರತಿಯೊಂದು ಲೆಕ್ಕವನ್ನು ಬರೆದಿಡುತ್ತಿದ್ದರು, ಹಣದ ವಹಿವಾಟು ಸಂಬಂಧಿಸಿದಂತೆ  ಪ್ರತಿಯೊಂದು ದಾಖಲೆಗಳನ್ನು ಸಂಗ್ರಹಿಸಿಡುತ್ತಿದ್ದರು ಎಂದು ಸುರೇಂದ್ರ ಕುಮಾರ್ ಸಂಬಂಧಿ ತಿಳಿಸಿದ್ದಾರೆ.

ದೇವನಹಳ್ಳಿ ಬಳಿ ಎರಡು ಎಕರೆ ಭೂಮಿಯನ್ನು ಲೀಸ್ ಗೆ ಪಡೆದಿದ್ದ ಸುರೇಂದ್ರ ಕುಮಾರ್ ಅದರಲ್ಲಿ 56 ನಾಯಿಗಳನ್ನು ಸಾಕಿದ್ದರು. ಪಕ್ಕದಲ್ಲಿದ್ದ ಗ್ರಾಮದ ಬಡ ಜನರಿಗೆ ಸಹಾಯ ಮಾಡುತ್ತಿದ್ದರು. ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 30 ಕೇರ್ ಟೇಕರ್ ಗಳು ಸುರೇಂದ್ರ ಕುಮಾರ್ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಹಣಕಾಸಿನ ವ್ಯವಹಾರವೇ ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ. ಸುರೇಂದ್ರ ಅವರ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ, ಅವರು ಹಣಕಾಸು ವ್ಯವಹಾರ ಮಾಡುತ್ತಿದ್ದರು. ಬೆಂಜ್ ಹಾಗೂ ಮಾರುತಿ ಇಕೋ ಕಾರನ್ನು ಹೊಂದಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!