ಬೆಂಗಳೂರು: ಯಶವಂತಪುರ ಮೆಟ್ರೋ ಸ್ಟೇಷನ್ ಹತ್ತಿರ ಖಾಸಗಿ ಕಂಪೆನಿಯ ಉದ್ಯೋಗಿ ಬಳಿ ಇದ್ದ ವಸ್ತುಗಳನ್ನು ದರೋಡೆ ಮಾಡಿದ 6 ಮಂದಿಯ ಗ್ಯಾಂಗ್ ನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಹಣಕಾಸು ಸಂಸ್ಥೆಯೊಂದರ ಉದ್ಯೋಗಿ ಮಂಜುನಾಥ್ ಎಂಬುವವರು ಮಾರಾಟಗಾರರ ಬಳಿಯಿಂದ 16 ಲಕ್ಷ ರೂಪಾಯಿ ಹಣ ಸಂಗ್ರಹಿಸಿ ಹಿಂತಿರುಗುತ್ತಿದ್ದ ವೇಳೆ ಅಕ್ಟೋಬರ್ 25ರಂದು 6 ಮಂದಿ ದರೋಡೆಕೋರರ ಗುಂಪು ಬೈಕಿನಲ್ಲಿ ಬಂದು ಮಂಜುನಾಥ್ ಅವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಣ ಕಿತ್ತು ಪರಾರಿಯಾದರು.
ಮಂಜುನಾಥ್ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದರು. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ನೋಡಿದ ಪೊಲೀಸರು ಮಾಹಿತಿ ಸಂಗ್ರಹಿಸಿದರು. ಸಂದೀಪ್, ಪ್ರಶಾಂತ್, ಶಿವಕುಮಾರ್ ಮತ್ತು ಇನ್ನಿಬ್ಬರು ಆರೋಪಿಗಳಾಗಿದ್ದಾರೆ. ಪೊಲೀಸರು ಅವರ ಬಳಿಯಿಂದ 14 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.