ಬೆಂಗಳೂರು: 500 ಮತ್ತು 1000 ನೋಟುಗಳ ನಿಷೇಧದ ನಂತರ ಬೆಂಗಳೂರು ನಾಗರಿಕರು ನೀರು ಬಳಕೆಯನ್ನು ಕಡಿಮೆ ಮಾಡಬೇಕಾಗಿ ಬಂದಿದೆ. ನೀರು ಪೂರೈಕೆ ಮಾಡುವ ಟ್ಯಾಂಕರ್ ಮಾಲಿಕರ ವ್ಯಾಪಾರದ ಮೇಲೆ ಹೊಡೆತ ಬಿದ್ದರೂ ಕೂಡ ಬೆಂಗಳೂರು ನಗರ ನೀರು ಸರಬರಾಜು ಟ್ಯಾಂಕರ್ ಗಳಿಗೆ ತೊಂದರೆಯಾಗಿಲ್ಲ. ಅವರು ಹಳೆಯ ಕರೆನ್ಸಿಗಳನ್ನು ಅವರ ಅಂಗಡಿಗಳಲ್ಲಿ ಪಡೆಯುತ್ತಿದ್ದಾರೆ.
ತಮ್ಮ ವ್ಯಾಪಾರವನ್ನು ಭದ್ರಪಡಿಸಿಕೊಳ್ಳಲು ಟ್ಯಾಂಕರ್ ಪೂರೈಕೆದಾರರು ಹಣ ಕೊಳ್ಳುವುದು ಮತ್ತು ನೀಡಿಕೆಯಲ್ಲಿ ಎಲ್ಲಾ ರೀತಿಯ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಹಳೆ ನೋಟುಗಳನ್ನು ಪಡೆದು ಬ್ಯಾಂಕಿನಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಭಾವಿಸಿಕೊಂಡರೆ ಇನ್ನು ಕೆಲವರು ಗ್ರಾಹಕರಿಗೆ ಚಿಲ್ಲರೆ ಹಣವನ್ನು ಸ್ವಲ್ಪ ದಿವಸ ಕಳೆದು ಕೊಡುತ್ತೇನೆ ಎನ್ನುತ್ತಾರೆ, ಇನ್ನು ಕೆಲವರು ಚಿಲ್ಲರೆ ಹಣವನ್ನು ಮಾತ್ರ ಪಡೆದುಕೊಳ್ಳುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ 6 ಸಾವಿರ ಲೀಟರ್ ಖಾಸಗಿ ಟ್ಯಾಂಕರ್ ನೀರಿಗೆ 540ರಿಂದ 600 ರೂಪಾಯಿ ಹೇಳುತ್ತಾರೆ. 3 ಸಾವಿರ ಲೀಟರ್ ನೀರಿಗೆ 400ರಿಂದ 450 ರೂಪಾಯಿಯಾಗುತ್ತದೆ. ಇದು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ. 5 ಕಿಲೋ ಮೀಟರ್ ಗಿಂತ ಜಾಸ್ತಿಯಾದರೆ ಹಣ ಜಾಸ್ತಿ ಕೇಳುತ್ತಾರೆ. ಆದರೆ ಬಿಡಬ್ಲ್ಯುಎಸ್ಎಸ್ ಬಿ ಪೂರೈಕೆ ಮಾಡುವ ಭರ್ತಿ ಟ್ಯಾಂಕರ್ ಬೆಲೆ 540 ರೂಪಾಯಿಗಳಷ್ಟಾಗುತ್ತದೆ.