ಸಂಗ್ರಹ ಚಿತ್ರ 
ರಾಜ್ಯ

ಎಟಿಎಂ ಹಣದೊಂದಿಗೆ ಪರಾರಿ ಪ್ರಕರಣ: ಚಾಲಕ ಡಾಮ್ನಿಕ್ ಬಂಧನ

ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಬ್ಯಾಂಕ್ ಹಣದೊಂದಿಗೆ ಚಾಲಕ ಪರಾರಿಯಾದ ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು ಚಾಲಕ ಡಾಮ್ನಿಕ್ ನನ್ನು ಬಂಧಿಸಿದ್ದಾರೆ.

ಬೆಂಗಳೂರು: ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಬ್ಯಾಂಕ್ ಹಣದೊಂದಿಗೆ ಚಾಲಕ ಪರಾರಿಯಾದ ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು ಚಾಲಕ ಡಾಮ್ನಿಕ್ ನನ್ನು ಬಂಧಿಸಿದ್ದಾರೆ.

ಚಾಲಕ ಡಾಮ್ನಿಕ್ ಸ್ನೇಹಿತ ನೋಡಲು ಕೆಆರ್ ಪುರಂ ಟಿನ್ ಫ್ಯಾಕ್ಟರಿ ಬಳಿ ಬಂದಾಗ ಆತನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಚಾಲಕ ಡಾಮ್ನಿಕ್ ರಾಯ್ ಆಗಮನದ ಕುರಿತು ಖಚಿತ ಮಾಹಿತಿ  ಪಡೆದ ಪೊಲೀಸರು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿ ಚಾಲಕ ಡಾಮ್ನಿಕ್ ರಾಯ್ ನನ್ನು ಬಂಧಿಸಿದ್ದಾರೆ. ನಿನ್ನೆಯಷ್ಟೇ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಡಾಮ್ನಿಕ್ ಪತ್ನಿ ಎಲ್ವಿನ್ ಅವರನ್ನು ಬಂಧಿಸಿದ್ದರು. ನಗರದ  ಬಾಣಸವಾಡಿ ಮನೆಯೊಂದರಲ್ಲಿ ಇರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ರಾತ್ರಿ ದಿಢೀರ್ ದಾಳಿ ಮಾಡಿ ಪತ್ನಿ ಎಲ್ವಿನ್ ರನ್ನು ಬಂಧಿಸಿದ್ದರು. ಅಂತೆಯೇ ಎಲ್ವಿನ್ ರ ಬಳಿ ಇದ್ದ ಸುಮಾರು 79.8 ಲಕ್ಷ ಹಣವನ್ನು ಪೊಲೀಸರು  ಜಪ್ತಿ ಮಾಡಿದ್ದರು.

ಲಾಜಿ ಕ್ಯಾಶ್ ಸಂಸ್ಥೆಯ ಸಿಬ್ಬಂದಿಯಾಗಿದ್ದ ಡಾಮ್ನಿಕ್ ಎಟಿಎಂಗೆ ಹಣ ತುಂಬಿಸುವ ವಾಹನಕ್ಕೆ ಚಾಲಕನಾಗಿದ್ದ. ಎಟಿಎಂಗೆ ಹಣ ತುಂಬಿಸುವ ವೇಳೆ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸೇರಿದ್ದ 1.37 ಕೋಟಿ ರುಪಾಯಿ ನಗದು ಹಣದ  ಜೊತೆ ಡಾಮ್ನಿಕ್ ಪರಾರಿಯಾಗಿದ್ದ. ಮರುದಿನ ಮೌಂಟ್ ಕಾರ್ಮಲ್ ಶಾಲೆಯ ಬಳಿ ವಾಹನ ಸಿಕ್ಕಿತ್ತಾದರೂ ಚಾಲಕ ರಾಯ್ ನಾಪತ್ತೆಯಾಗಿದ್ದ. ಆತನ ಪತ್ತೆಗಾಗಿ ಬಲೆ ಬೀಸಿದ್ದ ಬಾಣಸವಾಡಿ ಪೊಲೀಸರಿಗೆ ನಿನ್ನೆ ಪತ್ನಿ ಎಲ್ವಿನ್  ಮೇರಿಯನ್ನು ಬಂಧಿಸಿದ್ದರು.

ಪೊಲೀಸರು ನೀಡಿರುವ ಮಾಹಿತಿಂತೆ ಹಣ ಹೊತ್ತ ಪರಾರಿಯಾದ ಬಳಿಕ ಹಣದೊಂದಿಗೆ ಡೊಮ್ನಿಕ್ ರಾಯ್ ತನ್ನ ಪತ್ನಿ, ಮಗು ಜೊತೆ ಚಿತ್ತೂರು,ವೆಲ್ಲೂರು ಮಾರ್ಗವಾಗಿ ಚೆನ್ನೈ ಸೇರಿಕೊಂಡಿದ್ದ. ನವೆಂಬರ್ 23ರಂದು ರಾತ್ರಿ ಎಲ್ವಿನ್  ಮೇರಿ ತಂಗಿಯ ಮನೆಗೆ ತೆರಳಿದ್ದರು. ತಂಗಿ ಮತ್ತು ತಂಗಿ ಗಂಡನಿಗೆ ಎಲ್ಲಾ ವಿಷಯ ತಿಳಿಸಿದ್ದರು. ನವೆಂಬರ್ 24ರಂದು ಐವರು ತಮಿಳುನಾಡಿನ ಕೃಷ್ಣಗಿರಿಗೆ ತೆರಳಿದ್ದರು. ನಂತರ ಕೃಷ್ಣಗಿರಿಯಿಂದ ಕೊಯಮತ್ತೂರಿಗೆ ಪ್ರಯಾಣ  ಮಾಡಿದ್ದರು. ಅಲ್ಲಿಂದ ಕೊಯಮತ್ತೂರಿನಿಂದ ಕೃಷ್ಣಗಿರಿಗೆ ಬಂದಿದ್ದರು. ನವೆಂಬರ್ 25ರಂದು ಚರ್ಚ್ ನಲ್ಲಿ ದಂಪತಿ, ಮಗು ವಾಸವಿದ್ದರಂತೆ.

ನವೆಂಬರ್ 26ರಂದು ಮತ್ತೆ ವಾಪಸ್ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಡೊಮ್ನಿಕ್ ಪತ್ನಿ ಕೈಗೆ 79.08 ಲಕ್ಷ ಕೊಟ್ಟು ಮನೆಗೆ ತೆರಳಲು ಸೂಚಿಸಿದ್ದ. ತಾನು ಹಿಂದೆಯೇ ಮನೆಗೆ ಬರುವುದಾಗಿ ಹೇಳಿದ್ದ. ಈ ಮಾಹಿತಿ  ತಿಳಿದ ಪೊಲೀಸರು ನಿನ್ನೆ ರಾತ್ರಿ ಡೋಮ್ನಿಕ್ ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ. ಆಕೆ ನೀಡಿದ ಮಾಹಿತ ಮೇರೆಗೆ ಇಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಇಂದು ಚಾಲಕ ಡಾಮ್ನಿಕ್ ನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT