ನಾಗರಹಾವು ಕನ್ನಡ ಚಿತ್ರ 
ರಾಜ್ಯ

ತೆರೆ ಮೇಲೆ ಬಂದ 'ವಿಷ್ಣು' ನೋಡಿ ಅಭಿಮಾನಿಗೆ ಹೃದಯಾಘಾತ: ಸಾವು

ಸಾಹಸ ಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಅವರ ಮರು ಸೃಷ್ಟಿಯಿರುವ 'ನಾಗರಹಾವು' ಚಿತ್ರ ಪ್ರದರ್ಶನದ ವೇಳೆ ತೆರೆ ಮೇಲೆ ವಿಷ್ಣುವರ್ಧನ್ ಅವರನ್ನು ನೋಡಿದ ಅಭಿಮಾನಿಯೊಬ್ಬರಿಗೆ ಹೃದಯಾಘಾತವಾಗಿ...

ಬೆಂಗಳೂರು: ಸಾಹಸ ಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಅವರ ಮರು ಸೃಷ್ಟಿಯಿರುವ 'ನಾಗರಹಾವು' ಚಿತ್ರ ಪ್ರದರ್ಶನದ ವೇಳೆ ತೆರೆ ಮೇಲೆ ವಿಷ್ಣುವರ್ಧನ್ ಅವರನ್ನು ನೋಡಿದ ಅಭಿಮಾನಿಯೊಬ್ಬರಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

ಸುಬ್ರಮಣಿ ಅಲಿಯಾಸ್ ರಾಜು (31) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಜಯನಗರ ನಿವಾಸಿಯಾಗಿರುವ ಸುಬ್ರಮಣಿಯವರು, ನಿನ್ನೆಯಷ್ಟೇ ಬಿಡುಗಡೆಗೊಂಡ ನಾಗರಹಾವು ಚಿತ್ರವನ್ನು ಮಾರ್ನಿಂಗ್ ಶೋನಲ್ಲಿ ನೋಡಿದ್ದಾರೆ. ವಿಷ್ಣು ಅವರನ್ನು ನೋಡಬೇಕೆಂಬ ಆಸೆಗೆ ಮತ್ತೆ ಚಿತ್ರ ನೋಡಲು ಮಧ್ಯಾಹ್ನ ಸ್ವಾಗತ್ ಗರುಡಾ ಮಾಲ್ ಗೆ ಹೋಗಿದ್ದಾರೆ.

ನಾಗರಹಾವು ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ ಬಳಸಿ ನಾಗರಹಾವು ರೂಪದಲ್ಲಿ ತೆರೆ ಮೇಲೆ ತರಲಾಗಿದೆ. ಚಿತ್ರದ ಕಡೆಯ 10 ನಿಮಿಷದಲ್ಲಿ ಈ ಗ್ರಾಫಿಕ್ ದೃಶ್ಯಾವಳಿಗಳು ಮೂಡುತ್ತದೆ. ಈ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು ತೆರೆಯ ಮೇಲೆ ಬರುತ್ತಾರೆ.

ವಿಷ್ಣುವರ್ಧನ್ ಅವರನ್ನು ತೆರೆಮೇಲೆ ಕಾಣುತ್ತಿದ್ದಂತೆ ಸುಬ್ರಮಣಿಯವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ, ಈ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡು, ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸುಬ್ರಮಣಿಯವರನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?