ರಾಜ್ಯ

ಬೆಂಗಳೂರಿನ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಸರ್ಕಾರ ಅನುಮೋದನೆ

Sumana Upadhyaya
ಬೆಂಗಳೂರು: ನಗರದ 110 ಹಳ್ಳಿಗಳಿಗೆ ಸಾವಿರದ 886 ಕೋಟಿ ರೂಪಾಯಿ ವೆಚ್ಚದಲ್ಲಿ ನೀರು ಪೂರೈಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವರವಾದ ಯೋಜನಾ ವರದಿಯ ಮಾರ್ಪಾಡಿಗೆ ಅನುಮೋದನೆ ನೀಡಲು ಸರ್ಕಾರ ಆದೇಶ ನೀಡಿದೆ.
ಯೋಜನೆಯ ಮುಖ್ಯ ಎಂಜಿನಿಯರ್ ನರಸಿಂಹ ಮೂರ್ತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿ, ಅಕ್ಟೋಬರ್ 18ರಂದು ಆದೇಶ ಹೊರಡಿಸಲಾಗಿದೆ. ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯ ವೆಚ್ಚದ ಮೂರನೇ ಎರಡು ಭಾಗವನ್ನು ಸರ್ಕಾರ ಭರಿಸಿದರೆ ಉಳಿದ ಹಣವನ್ನು ಬಿಡಬ್ಲ್ಯುಎಸ್ಎಸ್ ಬಿ ಭರಿಸಲಿದೆ ಎಂದು ಹೇಳಿದರು.
ನಿಗಮದ ಒಪ್ಪಿಗೆಯನ್ನು ಸದ್ಯದಲ್ಲಿಯೇ ಪಡೆಯಲಾಗುವುದು. ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಬಿಡುಗಡೆಯಾದ ಹಣದಲ್ಲಿ ಸಾವಿರದ 586 ಕೋಟಿ ರೂಪಾಯಿ ಮೂಲ ಸೌಕರ್ಯ ಕೆಲಸಗಳಿಗೆ ವಿನಿಯೋಗವಾಗಲಿದ್ದು, 300 ಕೋಟಿ ರೂಪಾಯಿಯನ್ನು ನೀರಿನ ಪೂರೈಕೆ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ. 110 ಹಳ್ಳಿಗಳನ್ನು 2007ರಲ್ಲಿ ಹಿಂದಿನ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿಸಲಾಗಿತ್ತು.
SCROLL FOR NEXT