ಬೆಂಗಳೂರು: ತೊಂದರೆಗೀಡಾದ ಈರುಳ್ಳಿ ಬೆಳೆಗಾರರಿಗೆ ರಾಜ್ಯ ಸರ್ಕಾರ ಕೆಜಿಗೆ 6 ರೂಪಾಯಿ 24 ಪೈಸೆ ಬೆಂಬಲ ಬೆಲೆ ನಿಗದಿಪಡಿಸಿದೆ.
ಈರುಳ್ಳಿ ಬೆಳೆ ಹಠಾತ್ತನೆ ಕುಸಿದು ರೈತರಿಗೆ ತೀವ್ರ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯ ಪ್ರವೇಶ ಕ್ರಮಗಳನ್ನು ಕೈಗೊಂಡಿದೆ. ಈರುಳ್ಳಿ ಖರೀದಿಗೆ ಸರ್ಕಾರ ಈಗಾಗಲೇ 50 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಮಾರುಕಟ್ಟೆ ಒಕ್ಕೂಟದ ಮೂಲಕ ನವೆಂಬರ್ 2ರಿಂದ ಈರುಳ್ಳಿಗಳನ್ನು ಖರೀದಿಸಲಾಗುವುದು. ನಾವು ಸುಮಾರು 23 ಟನ್ ಈರುಳ್ಳಿ ಖರೀದಿಸಲು ನಿರ್ಧಾರ ಮಾಡಿದ್ದೇವೆ. ಕೇಂದ್ರ ಸರ್ಕಾರ 1 ಲಕ್ಷ ಟನ್ ಖರೀದಿಸಲಿದೆ. ಈರುಳ್ಳಿ ಬೆಲೆ ಸ್ಥಿರಗೊಳ್ಳುವವರೆಗೆ ರಾಜ್ಯ ಸರ್ಕಾರ ಈರುಳ್ಳಿ ಖರೀದಿಸಲಿದೆ ಎಂದು ಹೇಳಿದ್ದಾರೆ. ಈರುಳ್ಳಿ ಬೆಲೆ 3 ಲಕ್ಷ ಹೆಕ್ಟೇರ್ ಭೂಮಿಯಲ್ಲಿದೆ.
ಕೇಂದ್ರ ತಂಡ ಭೇಟಿ: ಕೇಂದ್ರ ಕೃಷಿ ಮತ್ತು ಕಂದಾಯ ಸಚಿವಾಲಯದ ಅಧಿಕಾರಿಗಳ ತಂಡ ನವೆಂಬರ್ 2ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು ಬರಗಾಲದಿಂದ ಬೆಳೆಗಳಿಗೆ ಆದ ನಷ್ಟದ ಕುರಿತು ಅಧ್ಯಯನ ನಡೆಸಲಿದ್ದಾರೆ.