ರಾಜ್ಯ

ಇ-ಕನ್ನಡವನ್ನು ಜನಪ್ರಿಯಗೊಳಿಸಲು ರಾಜ್ಯ ಸರ್ಕಾರದಿಂದ ಕ್ರಮ

Sumana Upadhyaya
ಬೆಂಗಳೂರು: ಕರ್ನಾಟಕ ರಾಜ್ಯ ರಚನೆಗೊಂಡು 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಕನ್ನಡಿಗರೆಲ್ಲರೂ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಐಟಿ ಮತ್ತು ಕನ್ನಡ ಭಾಷೆ, ಸಾಹಿತ್ಯವನ್ನು ಒಟ್ಟಿಗೆ ತರುವುದಾಗಿ ಹೇಳಿದೆ. ಕನ್ನಡ ಭಾಷೆಯನ್ನು ಜಗತ್ತಿನಾದ್ಯಂತ ಪಸರಿಸಲು ಇಲಾಖೆ ಮಾಡುತ್ತಿರುವ ಪ್ರಯತ್ನ ಇದಾಗಿದೆ.
ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಕನ್ನಡ ಭಾಷೆಯನ್ನು ಜನಪ್ರಿಯಗೊಳಿಸಿ ಇನ್ನಷ್ಟು ಜನರಿಗೆ ತಲುಪಿಸುವಂತೆ ಮಾಡಲು ಕನ್ನಡಕ್ಕೆ ಐಟಿ ಸ್ಪರ್ಶ ನೀಡುವುದು ಮುಖ್ಯ. ಈ ವರ್ಷ 60ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಭಾಷೆಯನ್ನು ಒಟ್ಟಿಗೆ ತರಲು ಪ್ರಯತ್ನಿಸುತ್ತೇವೆ. ಐಟಿಯಿಲ್ಲದೆ ಹೆಚ್ಚು ಜನರಿಗೆ ತಲುಪಲು ಸಾಧ್ಯವಿಲ್ಲ. ಅದರಲ್ಲೂ ಮುಖ್ಯವಾಗಿ ಯುವ ಸಮುದಾಯವನ್ನು ಎನ್ನುತ್ತಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ್, ಕನ್ನಡ ರಾಜ್ಯೋತ್ಸವದ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕನ್ನಡ ಡಿಜಿಟಲ್ ಲೈಬ್ರೆರಿಯನ್ನು ಆರಂಭಿಸಲಿದ್ದಾರೆ ಎಂದರು.
ಕನ್ನಡದ ಅರ್ಥಕೋಶ ಪೋರ್ಟಲ್ ಕಣಜದ ಸಂಯೋಜಕ ರಾಧಾಕೃಷ್ಣ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿ, ಕನ್ನಡದ ಡಿಜಿಟಲ್ ಲೈಬ್ರೆರಿಯನ್ನು ಅಭಿವೃದ್ಧಿಪಡಿಸುತ್ತೇವೆ. ಈ ಉದ್ದೇಶಕ್ಕಾಗಿ ಕನ್ನಡದ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲು ಕೆಲವು ಎಂಜಿನಿಯರಿಂಗ್ ಕಾಲೇಜುಗಳನ್ನು ಸಂಪರ್ಕಿಸಿದ್ದೇವೆ. ಕೆಲವು ವಿದ್ಯಾರ್ಥಿಗಳು ವೆಬ್ ಮತ್ತು ಮೊಬೈಲ್ ಆಧಾರಿತ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅದರಲ್ಲಿ ಬರೆಯಬಹುದು. ಇದು ಬರಹದಿಂದ ಭಾಷಣದವೆರೆಗಿನ ಕನ್ನಡ ಸಾಫ್ಟ್ ವೇರ್ ಎಂದು ಅವರು ಹೇಳಿದರು.
ಕಳೆದೊಂದು ದಶಕದಲ್ಲಿ ಅನೇಕ ಐರೋಪ್ಯ ರಾಷ್ಟ್ರಗಳು ಅಲ್ಲಿನ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನು ಡಿಜಿಟಲ್ ಲೈಬ್ರೆರಿ ಮಾದರಿಯಲ್ಲಿ ಅಭಿವೃದ್ದಿಪಡಿಸಿವೆ. ಓದುಗರು ಇಂಟರ್ನೆಟ್ ನಲ್ಲಿ ಪುಸ್ತಕಗಳನ್ನು ಓದಬಹುದು. ''ನಾವು ಈಗಾಗಲೇ ಡಿಜಿಟಲ್ ಲೈಬ್ರೆರಿಯ ಮೊದಲ ಹಂತವನ್ನು ಆರಂಭಿಸಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಪ್ರತಿ ಕನ್ನಡ ಪುಸ್ತಕಗಳು ಡಿಜಿಟಲ್ ಮಾದರಿಯಲ್ಲಿ ಸಿಗುತ್ತವೆ. ಅದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸುವ ಪುಸ್ತಕಗಳನ್ನು ಡಿಜಿಟಲೀಕರಣ ಮಾಡುತ್ತಿದ್ದೇವೆ ಎಂದು ರಾಧಾಕೃಷ್ಣ ಹೇಳಿದರು.
ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಕೂಡ ಇಂತಹದ್ದೇ ಡಿಜಿಟಲ್ ಲೈಬ್ರೆರಿಯನ್ನು ಒಳಗೊಂಡಿದ್ದು ಭಾರತೀಯ ಭಾಷೆಗಳಲ್ಲಿ ಐದೂವರೆ ಲಕ್ಷಕ್ಕೂ ಅಧಿಕ ಪುಸ್ತಕಗಳು ದೊರೆಯುತ್ತವೆ.ಅವುಗಳಲ್ಲಿ ಸುಮಾರು 3 ಸಾವಿರ ಕನ್ನಡ ಭಾಷೆಯಲ್ಲಿವೆ.
SCROLL FOR NEXT