ಬೆಂಗಳೂರು: ಜನ್-ಧನ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ರಾಜ್ಯದ 959 ಗ್ರಾಮಗಳಲ್ಲಿ ಎಟಿಎಂ ಸೌಲಭ್ಯಗಳನ್ನು ಅಳವಡಿಸಲಿದೆ ಎಂದು ತಿಳಿದುಬಂದಿದೆ.
ಕೇಂದ್ರದ ಸಹಕಾರದೊಂದಿದೆ ಕೈಜೋಡಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜ್ಯ ಇಲಾಖೆ ಪ್ರತೀ 5 ಕಿ.ಮೀ ಅಂತರದಲ್ಲಿ ಒಂದೊಂದು ಎಟಿಎಂ ವ್ಯವಸ್ಥೆಯನ್ನು ಅಳವಡಿಸುವ ಯೋಜನೆಯನ್ನು ಕೈಗೊಳ್ಳುತ್ತಿದೆ.
ಆರ್ಥಿಕ ಸೇವೆಗಳು ಪ್ರತೀಯೊಬ್ಬ ನಾಗರೀಕನಿಗೂ ತಲುಪಬೇಕೆಂಬ ಉದ್ದೇಶದಿಂದ ಜನ್-ಧನ್ ಯೋಜನೆಯಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಎಟಿಎಂ ಸೌಲಭ್ಯವಿಲ್ಲದ ಗ್ರಾಮಗಳ ಕುರಿತಂತೆ ಮಾಹಿತಿ ನೀಡುವಂತೆ ಈಗಾಗಲೇ ಕೇಂದ್ರ ವರದಿಯನ್ನು ಕೇಳಿದ್ದು, ಈ ಬಗ್ಗೆ ಅಧಿಕಾರಿಗಳು ಪಟ್ಟಿಯನ್ನು ತಯಾರು ಮಾಡಲಿದ್ದಾರೆಂದು ಆರ್ ಡಿಪಿಆರ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಎಟಿಎಂ ವ್ಯವಸ್ಥೆಗೆ ಬಾಗಲಕೋಟೆಯಿಂದ 4 ಗ್ರಾಮ, ಬಳ್ಳಾರಿ 40, ಬೆಳಗಾವಿ 95, ಬೆಂಗಳೂರು 4, ಬೆಂಗಳೂರು ಗ್ರಾಮಾಂತರ 26, ಬೀದರ್ 4, ಚಾಮರಾಜನಗರ 26, ಚಿಕ್ಕಬಳ್ಳಾಪುರ 32, ಚಿಕ್ಕಮಗಳೂರು 5, ಚಿತ್ರದುರ್ಗ 25, ದಕ್ಷಿಣ ಕನ್ನಡ, 93, ದಾವಣಗೆರೆ 28, ಧಾರವಾಡ 66, ಗದಗ್ 51, ಹಾಸನ, 49, ಹಾವೇರಿ 31, ಕಲಬುರ್ಗಿ 25, ಕೊಡಗು 1, ಕೊಪ್ಪಳ 33, ಮಂಡ್ಯ 33, ರಾಯಚೂರು 46, ರಾಮನಗರ 68, ಶಿವಮೊಗ್ಗ 28, ತುಮಕೂರು 81, ಉಡುಪಿ 41 , ಉತ್ತರ ಕನ್ನಡ 4, ವಿಜಯಪುರ 15, ಯಾದಗಿರಿ 5 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.