ರಾಜ್ಯ

ಸಹಜ ಸ್ಥಿತಿಯತ್ತ ಬೆಂಗಳೂರು: ಬಸ್-ನಮ್ಮ ಮೆಟ್ರೋ ಸಂಚಾರ ಆರಂಭ, ಅಂಗಡಿ ಮುಂಗಟ್ಟು ಓಪನ್

Vishwanath S
ಬೆಂಗಳೂರು: ಕಾವೇರಿ ವಿವಾದದಿಂದಾಗಿ ಹಿಂಸಾಚಾರಕ್ಕೀಡಾಗಿದ್ದ ಬೆಂಗಳೂರು ಮಹಾನಗರ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಮುಂಜಾಗೃತೆ ಕ್ರಮವಾಗಿ ಹೆಚ್ಚುವರಿ ಸೇನೆಯನ್ನು ರಾಜ್ಯಕ್ಕೆ ಕರೆಸಿಕೊಳ್ಳಲಾಗಿತ್ತು. ಆದರೆ ಇಂದು ಯಾವುದೇ ಪ್ರತಿಭಟನೆಗಳು ಹಾಗೂ ಹಿಂಸಾಚಾರ ವರದಿಯಾಗದ ಹಿನ್ನೆಲೆಯಲ್ಲಿ ಜನಜೀವನ ಸಹಜಸ್ಥಿತಿಗೆ ಮರಳಿದೆ. 
ಹಿಂಸಾಚಾರದಿಂದಾಗಿ ಬೆಂಗಳೂರಿನ ಪ್ರಮುಖ ನಗರಗಳಲ್ಲಿ ನಿನ್ನೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಇಂದು ಯಾವುದೇ ಅಹಿತಕರ ಘಟನೆಗಳು ವರದಿಯಾಗದ ಹಿನ್ನೆಲೆಯಲ್ಲಿ ಅಂಗಡಿ ಹಾಗೂ ಹೊಟೇಲ್ ಮಾಲೀಕರು ತಮ್ಮ ಅಂಗಡಿಗಳನ್ನು ತೆರೆದಿದ್ದು ಅವಶ್ಯಕ ವಸ್ತುಗಳನ್ನು ಖರೀದಿಸಲು ಜನರು ಮುಂದಾಗಿದ್ದಾರೆ. 
ಬಿಎಂಟಿಸಿ-ಕೆಎಸ್ಆರ್ಟಿಸಿ ಸಂಚಾರ ಆರಂಭ
ಇನ್ನು ನಿಷೇಧಾಜ್ಞೆ ಹಿನ್ನಲೆಯಲ್ಲಿ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಧಗಿತಗೊಳಿಸಲಾಗಿತ್ತು. ಇಂದು ಯಾವುದೇ ಅಹಿತಕರ ಘಟನೆಗಳು ವರದಿಯಾಗದ ಹಿನ್ನಲೆಯಲ್ಲಿ ಸಂಜೆ 5 ಗಂಟೆ ನಂತರ ಬಿಎಂಟಿಸಿ ಬಸ್ ಸಂಚಾರ ಆರಂಭಿಸಲಾಗಿದೆ. ಈ ಮಧ್ಯೆ ಕೆಎಸ್ಆರ್ಟಿಸಿ ಬಸ್ ಸೇವೆ ಸಹ ಆರಂಭಗೊಂಡಿದ್ದು, ತಮಿಳುನಾಡು ಹೊರತು ಪಡಿಸಿ ಕೆಎಸ್ಆರ್ಟಿಸಿ ಬಸ್ ಗಳು ಸಂಚರಿಸುತ್ತೀವೆ. ಮಂಡ್ಯದಿಂದ ಮೂರು ಕೆಎಸ್ಆರ್ಟಿಸಿ ಬಸ್ ಗಳು ಬೆಂಗಳೂರಿನತ್ತ ಹೊರಟು ನಿಂತಿವೆ. 
ಮೆಟ್ರೋ ಸಂಚಾರ ಆರಂಭ
ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗುತ್ತಿದ್ದಂತೆ ಇತ್ತ ನಮ್ಮ ಮೆಟ್ರೋ ಸಹ ಸಂಚಾರ ಆರಂಭಿಸಿದೆ. ಇದೀಗ 15 ನಿಮಿಷಕ್ಕೊಂದು ಮೆಟ್ರೋ ರೈಲು ಓಡಲಿದ್ದು, ಜನದಟ್ಟನೆಗೆ ಅನುಗುಣವಾಗಿ ಮೆಟ್ರೋ ರೈಲು ಒಡಿಸಲು ಬಿಎಂಆರ್ಸಿಎಲ್ ನಿರ್ಧಾರ.
SCROLL FOR NEXT