ರಾಜ್ಯ

ಪತ್ರಕರ್ತರ ಹತ್ಯೆಗೆ ಸಂಚು: 13 ಅಪರಾಧಿಗಳಿಗೆ ಐದು ವರ್ಷ ಜೈಲು ಶಿಕ್ಷೆ

Lingaraj Badiger
ಬೆಂಗಳೂರು: ಪತ್ರಕರ್ತರು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಹಿಂದೂ ಸಂಘಟನೆಯ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಶುಕ್ರವಾರ 13 ಅಪರಾಧಿಗಳಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಸಂಸದ ಪ್ರತಾಪ್ ಸಿಂಹ, ಪತ್ರಕರ್ತ ವಿಶ್ವೇಶ್ವರ ಭಟ್, ಉದ್ಯಮಿ ವಿಜಯ್ ಸಂಕೇಶ್ವರ ಹಾಗೂ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಹತ್ಯೆಗೆ ಸಂಚು ರೂಪಿಸಿದ್ದ 13 ಆರೋಪಿಗಳು ತಪ್ಪಿತಸ್ಥರು ಎಂದು ನಿನ್ನೆ ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದರಿಸಿತ್ತು. 
ಅಪರಾಧಿಗಳಿಗೆ ಇಂದು ಶಿಕ್ಷೆ ಪ್ರಕಟಿಸಿದ ಕೋರ್ಟ್, 5 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 7 ಸಾವಿರ ರುಪಾಯಿ ದಂಡ ವಿಧಿಸಿದೆ. 
ಶೋಯಿಬ್‌ ಅಹ್ಮದ್‌ ಮಿರ್ಜಾ, ಮೊಹ್ಮದ್‌ ಸಾದಿಕ್‌ ಲಷ್ಕರ್‌, ಡಾ.ಇಮ್ರಾನ್‌ ಅಹ್ಮದ್‌, ಸಯ್ಯದ್‌ ತಾಂಜಿಮ್‌ ಅಹ್ಮದ್‌, ಡಾ.ನಯೀಂ ಸಿದ್ದಿಕಿ, ಅಬ್ದುಲ್‌ ಹಕೀಂ ಜಮಾದಾರ್‌, ಉಬೇದುಲ್ಲಾ ಬಹದ್ದೂರ್‌, ವಾಹಿದ್‌ ಹುಸೇನ್‌, ರಿಯಾಜ್‌ ಅಹ್ಮದ್‌ ಬ್ಯಾಹಟ್ಟಿ, ಮಹ್ಮದ್‌ ಅಕ್ರಮ್‌, ಡಾ.ಜಾಫ‌ರ್‌ ಇಕ್ಬಾಲ್, ಶೊಲ್ಲಾಪೂರ್‌, ಮೆಹಬೂಬ್‌ ಬಾಗಲಕೋಟ್‌ ಮತ್ತು ಒಬೈದ್‌ ಉರ್‌ ರೆಹಮಾನ್‌ ಪತ್ರಕರ್ತರು ಹಾಗೂ ಇತರೆ ಗಣ್ಯರ ಹತ್ಯೆಗೆ ಸಂಚು ರೂಪಿಸಿದ್ದರು. ಈ ಸಂಬಂಧ 2012ರ ಆಗಸ್ಟ್ 29ರಂದು ಪ್ರಕರಣ ದಾಖಲಾಗಿತ್ತು.
SCROLL FOR NEXT