ಅಪಘಾತಕ್ಕೀಡಾ ಮಾರುತಿ 800 ಕಾರು 
ರಾಜ್ಯ

ಬೆಂಗಳೂರು: ನಿದ್ದೆ ಮಂಪರಿನಲ್ಲಿ ಚಾಲನೆ, ಒಂದೇ ಕುಟುಂಬದ ಮೂವರು ಸಾವು

ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ನೈಸ್ ರಸ್ತೆಯ ಸೋಮಪುರ ಬಳಿ ಗುರುವಾರ ಬೆಳಿಗ್ಗೆ 6.30 ರ ...

ಬೆಂಗಳೂರು: ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಒಂದೇ  ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ನೈಸ್ ರಸ್ತೆಯ ಸೋಮಪುರ ಬಳಿ ಗುರುವಾರ ಬೆಳಿಗ್ಗೆ  6.30 ರ ವೇಳೆಗೆ ಸಂಭವಿಸಿದೆ.

ಬನಶಂಕರಿ ಸಮೀಪದ ಪ್ರಗತಿನಗರದ ನಿವಾಸಿಗಳಾದ ರಾಮಚಂದ್ರ (75), ಅವರ ಮಗಳು ಭಾಗೀರಥಿ (35) ಹಾಗೂ ಮಗ ಶಿವಕುಮಾರ್ (28)  ಮೃತ ದುರ್ದೈವಿಗಳು. ಇನ್ನೂ ಅಪಘಾತದಲ್ಲಿ  ಭಾಗೀರಥಿ ಅವರ ಮಗ ಭರತ್ (12), ಮಗಳು ಬಿಂದುಶ್ರೀ (10) ಹಾಗೂ ತಾಯಿ ಬಸಮ್ಮ (65) ಗಾಯಗೊಂಡಿದ್ದಾರೆ.

ಬುಧವಾರ ಬಸಮ್ಮ ಅವರ ತಂದೆಯ ವರ್ಷದ ಕಾರ್ಯವಿತ್ತು. ಹೀಗಾಗಿ, ಕುಟುಂಬ ಸದಸ್ಯರೆಲ್ಲ ಎರಡು ದಿನಗಳ ಹಿಂದೆ ತಮ್ಮ ‘ಮಾರುತಿ 800’ ಕಾರಿನಲ್ಲಿ ಕಲಬುರ್ಗಿಯ ಸಾಲಹಳ್ಳಿ ಗ್ರಾಮಕ್ಕೆ ತೆರಳಿದ್ದರು. ಕಾರ್ಯ ಮುಗಿಸಿಕೊಂಡು ಬುಧವಾರ ಸಂಜೆ  ಅಲ್ಲಿಂದ ಬೆಂಗಳೂರಿಗೆ ಹೊರಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಶಿವಕುಮಾರ್ ಮತ್ತು ಭಾಗಿರಥಿ ಸ್ಥಳದಲ್ಲೇ ಮೃತಪಟ್ಟರೇ. ಗಂಭೀರ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮಚಂದ್ರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಲಘಟ್ಟಪುರ ಪೊಲೀಸರು ತಿಳಿಸಿದ್ದಾರೆ. ರಾತ್ರಿಯಿಡೀ ಶಿವಕುಮಾರ್ ಒಬ್ಬರೇ ವಾಹನ ಚಾಲನೆ ಮಾಡಿದ್ದರಿಂದ, ಅವರಿಗೆ ನಿದ್ದೆಯ ಮಂಪರು  ಆವರಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT