ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಕಾಶ್ಮೀರ ಉಗ್ರರ ದಾಳಿ: ಬೆಳಗಾವಿ ಯೋಧ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಬೆಳಗಾವಿು ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರ ಗ್ರಾಮದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ...

ಸಂಗ್ರಹ ಚಿತ್ರ
Manjula VN
Updated On : 5 Apr 2017, 1:11 am
ಕಿತ್ತೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಬೆಳಗಾವಿು ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರ ಗ್ರಾಮದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. 
ಬಸಪ್ಪ ಹಣಮಂತಪ್ಪ ಭಜಂತ್ರಿ (55) ಹುತಾತ್ಮರಾದ ಯೋಧ ಎಂದು ಹೇಳಲಾಗುತ್ತಿದೆ. ಕಾಶ್ಮೀರದ ಉಪ ಚುನಾವಣೆಗೆಂದು ಬಸಪ್ಪ ಅವರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಪಂಥಾ ಚೌಕ್ ಬಳಿ ಉಗ್ರರು ದಾಳಿ ನಡೆಸಿದ್ದರು. ದಾಳಿ ವೇಳೆ ಬಸಪ್ಪ ಅವರು ಸೇರಿದಂತೆ 6 ಸಿಆರ್ ಪಿಎಫ್ ಯೋಧರು ಹಾಗೂ ಇಬ್ಬರು ನಾಗರೀಕರು ಗಾಯಗೊಂಡಿದ್ದರು. ಕೂಡಲೇ ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಬಸಪ್ಪ ಅವರು ಹುತಾತ್ಮರಾಗಿದ್ದರು. 
ಬಸಪ್ಪ ಅವರು ಕಳೆದ 18 ವರ್ಷಗಳಿಂದಲೂ ಸಿಆರ್ ಪಿಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರ ಪಾರ್ಥಿವ ಶರೀರವು ಕಾಶ್ಮೀರದಿಂದ ವಿಮಾನದ ಮೂಲಕ ಇಂದು ಗೋವಾಕ್ಕೆ ಆಗಮಿಸಲಿದೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement