ರಾಜ್ಯ

ಟೊಳ್ಳು ಬೆದರಿಕೆಗೆ ಹೆದರಲ್ಲ, ಅವರ ಕ್ರೂರತೆಯಿಂದ ಆಘಾತವಾಗಿದೆ: ಉಡುಪಿ ಡಿಸಿ

Shilpa D
ಉಡುಪಿ: "ಮರಳು ಮಾಫಿಯಾದವರ ಟೊಳ್ಳು ಬೆದರಿಕೆಗೆ ನಾನು ಹೆದರುವುದಿಲ್ಲ, ಆದರೆ ಅವರ ಕ್ರೂರತೆಯಿಂದ ನನಗೆ ಆಘಾತವಾಗಿದೆ, ಅವರಿಗೆ ಕಾನೂನಿನ ಭಯವಿಲ್ಲ, ವ್ಯವಸ್ಥೆಗೆ ಗೌರವ ಕೂಡ ಕೊಡುವುದಿಲ್ಲ, ಆದರೆ ನಾನು ಹೋರಾಟವನ್ನು ಮುಂದುವರಿಸುತ್ತೇನೆ "  ಉಡುಪಿ ಉಪ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತುಗಳಿವು. 
ಮಣಿಪಾಲದಲ್ಲಿ ಮಾತನಾಡಿದ ಅವರು, ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ, ಮುಂದಿನ ದಿನಗಳಲ್ಲಿ ಮರಳು ಮಾಫಿಯ ಮೇಲೆ ದಾಳಿ ನಡೆಸುತ್ತೇನೆ, ಈ ಘಟನೆ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಡಿಸಿ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಉಡುಪಿಯಲ್ಲಿ ನಾಗರಿಕರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ ಕೆಲಸ ಧಿಕ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು. ಸ್ಥಳಕ್ಕೆ ಬಂದ ಡಿಸಿ ಪ್ರಿಯಾಂಕಾ ವಾಪಸ್ ಕೆಲಸಕ್ಕೆ ತೆರಳುವಂತೆ ಅವರೆಲ್ಲರ ಮನವೊಲಿಸಿ ಕಳುಹಿಸಿದರು. 
ಜಿಲ್ಲಾ ನಾಗರಿಕ ಸಮಿತಿ ಕಾರ್ಯಕರ್ತ ನಿತ್ಯಾನಂದ ಮಾತನಾಡಿ, ರಾಜಕೀಯ ನಾಯಕರು ಮರಳು ಮಾಫಿಯಾದವರ ಕೈಗೊಂಬೆಯಾಗಿದ್ದಾರೆ ಎಂದು ಆರಕೋಪಿಸಿದ್ದಾರೆ. 
SCROLL FOR NEXT