ಹಾವೇರಿ: ರೈತರೊಬ್ಬರು ತಮ್ಮ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಮೃತ ರೈತನನ್ನು ರಾಜು ಲಕ್ಷ್ಮಣ್ ಅಂಬಿಗೆರೆ(30 ವರ್ಷ) ಎಂದು ಗುರುತಿಸಲಾಗಿದ್ದು ರಾಣೆಬೆನ್ನೂರು ತಾಲ್ಲೂಕಿನ ಮೆಡ್ಲೆರಿ ಗ್ರಾಮದವರಾಗಿದ್ದಾರೆ.
ರಾಜು ಲಕ್ಷ್ಮಣ್ ಹಿರೆಬಿದರಿ ಕಾರ್ಪೊರೇಶನ್ ಬ್ಯಾಂಕ್ ನಿಂದ 5 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಖಾಸಗಿಯಾಗಿ 2 ಲಕ್ಷ ರೂಪಾಯಿ ಸಾಲ ಹೊಂದಿದ್ದರು ಎಂದು ರಾಣೆಬೆನ್ನೂರು ಗ್ರಾಮಾಂತರ ಪಿಎಸ್ಐ ಸಿ ಸಿ ಚೌಗಲೆ ತಿಳಿಸಿದ್ದಾರೆ.
ಬೆಳೆದ ಫಸಲು ಕೈಗೆ ಸಿಗದೆ ನಷ್ಟವುಂಟಾಗಿದ್ದರಿಂದ ಹಣಕಾಸಿನ ತೊಂದರೆಯುಂಟಾಗಿ ಅಂಬಿಗೆರೆ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.