ಬೆಳಗಾವಿ: ಮನೆಯಲ್ಲಿ ತನ್ನ ಪ್ರಿಯಕರನೊಂದಿಗೆ ಮಾತನಾಡುತ್ತಿದ್ದು ಪುತ್ರಿಯನ್ನು ಕಂಡ ತಂದೆಯೊಬ್ಬ ಕೆಂಡಾಮಂಡಲಗೊಂಡು ಪ್ರೇಮಿಗಳಿಬ್ಬರನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆಯೊಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ನಡೆದಿದೆ.
ರುಕ್ಕಮ್ಮವ್ವ (16), ಮಂಜುನಾಥ್ ಪದೇಶ್ವರ್ ಹತ್ಯೆಯಾದ ಪ್ರೇಮಿಗಳಾಗಿದ್ದಾರೆ. ಯಲ್ಲಪ್ಪ (45) ಕೊಲೆ ಆರೋಪಿಯಾಗಿದ್ದಾನೆ.
ಪದೇಶ್ವರ್ ಕಳೆದ ರಾತ್ರಿ ರುಕ್ಕಮ್ಮವ್ವ ಮನೆಯ ಬಳಿ ಬಂದಿದ್ದಾರೆ. ತಂದೆ ಯಲ್ಲಪ್ಪ ಮಲಗಿರುವುದನ್ನು ಕಂಡ ರುಕ್ಕಮ್ಮವ್ವ ಪ್ರಿಯಕರ ಪದೇಶ್ವರ್ ಜೊತೆ ಮಾತನಾಡುತ್ತಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಯಲ್ಲಪ್ಪ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದಾನೆ. ನಂತರ ಕೊಡಲಿಯನ್ನು ತಂದ ಯಲ್ಲಪ್ಪ ಇಬ್ಬರನ್ನೂ ಕೊಚ್ಚಿ ಕೊಲೆಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.
ಕೊಲೆ ಮಾಡಿದ ಬಳಿಕ ಸವದತ್ತಿ ಠಾಣೆಗೆ ತೆರಳಿದ ಆರೋಪಿ ಯಲ್ಲಪ್ಪ, ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics