ರಾಜ್ಯ

ನನ್ನನ್ನು ಅತಿ ದೊಡ್ಡ ಕುಡುಕ ಎಂದು ಬಿಂಬಿಸಲಾಗಿತ್ತು: ಹೈಕೋರ್ಟ್ ನ್ಯಾ. ಆನಂದ ಬೈರಾರೆಡ್ಡಿ

Shilpa D
ಬೆಂಗಳೂರು: ಕುಡಿಯುವುದನ್ನು ನಾನು ತುಂಬಾ ಎಂಜಾಯ್ ಮಾಡುತ್ತಿದ್ದೆ, ಅದರಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ, ಆದರೆ ಹೈಕೋರ್ಟ್ ಜಡ್ಜ್ ಹುದ್ದೆಗಾಗಿ ಬೆಲೆ ತೆರಬೇಕಾಯಿತು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ.
ಹೈಕೋರ್ಟ್ ಮತ್ತು ಕರ್ನಾಟಕ ರಾಜ್ಯ ಬಾರ್ ಅಸೋಸಿಯೇಷನ್ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನನ್ನು ಅತಿ ದೊಡ್ಡ ಕುಡುಕ ಎಂದು ಬಿಂಬಿಸಿದ್ದರಿಂದ ನನಗೆ ಜಡ್ಜ್ ಆಗುವ ಅವಕಾಶ ಕೈ ತಪ್ಪಿ ಹೋಗುತ್ತಿತ್ತು. ಕುಡಿತದಿಂದಾಗಿ ನನಗೆ ಹೈಕೋರ್ಟ್ ಜಡ್ಜ್ ಆಗುವ ಅವಕಾಶದಿಂದ ವಂಚಿತನಾಗುತ್ತಿದ್ದೆ, ಆದರೆ ನಾನು ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ಅವರಲ್ಲಿ ಮನವಿ ಮಾಡಿಕೊಂಡೆ, ಅವರು ನನಗೆ ಬೆಂಬಲ ನೀಡಿದರು, ಅಂತಿಮವಾಗಿ ನನ್ನನ್ನು ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡಲಾಯಿತು ಎಂದು ಹೇಳಿದರು.
12 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರ ಅಧಿಕಾರ ಮೇ.1 ರಂದು ಕೊನೆ ಗೊಳ್ಳಲಿದೆ. 2005 ರ ಮಾರ್ಚ್ 7 ರಂದು ರೆಡ್ಡಿ ಅವರನ್ನು ಕರ್ನಾಟಕ ಹೈಕೋರ್ಟ್ ಗೆ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿತ್ತು. 
ಇದೇ ವೇಳೆ ಮಾತನಾಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಬ್ರತೋ ಕಮಲ್ ಮುಖರ್ಜಿ, ಬೈರಾರೆಡ್ಡಿ ಅವರರು ಕ್ರಿಯಾಶೀಲ ವ್ಯಕ್ತಿ, ನ್ಯಾಯಾಂಗ ಮತ್ತು ಆಡಿತಾತ್ಮಕವಾಗಿ ಅವರ ಕೊಡುಗೆ ಅಪಾರವಾದದ್ದು ಎಂದು ಹೇಳಿದ್ದಾರೆ.
SCROLL FOR NEXT