ಸಂಗ್ರಹ ಚಿತ್ರ 
ರಾಜ್ಯ

ಲೈಂಗಿಕ ಕಿರುಕುಳ ಆರೋಪ: ಕನ್ನಡ ಚಿತ್ರ ನಟಿಯಿಂದ ದೂರು ದಾಖಲು

ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದರು ಎಂದು ಆರೋಪಿಸಿ ಚಿತ್ರ ನಟಿಯೊಬ್ಬರು ಪೊಲೀಸರಿಗೆ ಸೋಮವಾರ ದೂರು ನೀಡಿದ್ದಾರೆ.

ಬೆಂಗಳೂರು: ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದರು ಎಂದು ಆರೋಪಿಸಿ ಚಿತ್ರ ನಟಿಯೊಬ್ಬರು ಪೊಲೀಸರಿಗೆ ಸೋಮವಾರ ದೂರು ನೀಡಿದ್ದಾರೆ.

ಮಾಧ್ಯಮಗಳ ವರದಿಯಂತೆ ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಸಚಿನ್ ಹಾಗೂ ಪ್ರವೀಣ್ ಎಂಬ ಇಬ್ಬರು ಯುವಕರು ಚಿತ್ರನಟಿಯೊಬ್ಬರ ಕೈ ಹಿಡಿದು ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾರೆ.   ಯುವಕರಿಬ್ಬರೂ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಟಿ ತಮ್ಮ ದೂರಿನಲ್ಲಿ ನಟಿ ತಿಳಿಸಿದ್ದಾರೆ. ಪ್ರಸ್ತುತ ಆರೋಪಿಗಳಿಬ್ಬರೂ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸುದ್ದಿವಾಹಿನಿಯೊಂದಿಗೆ ಸಂತ್ರಸ್ತ ನಟಿ ಮಾತನಾಡಿದ್ದು,  "ಈ ಇಬ್ಬರೂ ಯುವಕರು ನನಗೆ ಎರಡು ವರ್ಷಗಳಿಂದ ಕಿರುಕುಳ ನೀಡುತ್ತಿದ್ದರು. ಸರಿಯಾಗುತ್ತಾರೆ ಎಂದು ಈವರೆಗೂ ನಾನು ಸುಮ್ಮನಿದ್ದೆ. ಅಲ್ಲದೇ ಕರೆ ಮಾಡಿ  ಕೆಟ್ಟದಾಗಿ ಬೈಯ್ಯುತ್ತಿದ್ದರು. ಕೆಟ್ಟ ಸಂದೇಶಗಳನ್ನೂ ಕಳುಹಿಸುತ್ತಿದ್ದರು. ಇದನ್ನೆಲ್ಲಾ ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಪ್ರಕರಣ ದೊಡ್ಡದಾಗಬಾರದೆಂದು ಈವರೆಗೂ ಸುಮ್ಮನಿದ್ದೆ. ಆದರೆ ನಿನ್ನೆಯ ಘಟನೆ ತಮಗೆ ತುಂಬಾ  ಭಯ ಹುಟ್ಟಿಸಿದ್ದು ಇದೇ ಕಾರಣಕ್ಕೆ ದೂರು ನೀಡುತ್ತಿದ್ದಾನೆ ಎಂದು ಹೇಳಿದ್ದಾರೆ.

ಪ್ರಸ್ತುತ ಘಟನೆ ಸಂಬಂಧ ರಾಜಗೋಪಾಲ್ ನಗರದ ಪೊಲೀಸ್ ಠಾಣೆಯಲ್ಲಿ ನಟಿ ದೂರು ನೀಡಿದ್ದು, ಐಪಿಸಿ ಸೆಕ್ಷನ್ 354 ಕಾಯ್ದೆಯಡಿಯಲ್ಲಿ ಯುವಕರಿಬ್ಬರ ವಿರುದ್ಧ ದೂರು ದಾಖಲಾಗಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!