ಮಲಗನಕೆರೆ ಬುಡಕಟ್ಟು ಹಾಡಿಯಲ್ಲಿ ಕಳೆದೆರಡು ವರ್ಷಗಳಿಂದ ಮರದ ಮೇಲೆ ವಾಸಿಸುತ್ತಿರುವ ಗಜ್ಜ 
ರಾಜ್ಯ

ಮೈಸೂರು: ಮರದ ಮೇಲೆ ವಾಸಿಸುತ್ತಿದ್ದ ಜೇನು ಕುರುಬ ಸೇರಿ 25 ಮಂದಿಗೆ ಮನೆ ನೀಡಲು ಸರ್ಕಾರ ನಿರ್ಧಾರ

ಕಳೆದ ಎರಡು ವರ್ಷಗಳಿಂದ ವಾಸಿಸಲು ಮನೆಯಿಲ್ಲದೇ ಮರದ ಮೇಲೆ ವಾಸಿಸುತ್ತಿರುವ ಜೇನು ಕುರುಬ ಸೇರಿದಂತೆ 25 ಮಂದಿ ಬಡುಕಟ್ಟು ಕುಟುಂಬಕ್ಕೆ..

ಮೈಸೂರು: ಕಳೆದ ಎರಡು ವರ್ಷಗಳಿಂದ ವಾಸಿಸಲು ಮನೆಯಿಲ್ಲದೇ ಮರದ ಮೇಲೆ ವಾಸಿಸುತ್ತಿರುವ ಜೇನು ಕುರುಬ ಸೇರಿದಂತೆ 25 ಮಂದಿ ಬಡುಕಟ್ಟು ಕುಟುಂಬಕ್ಕೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನೀಡಲು ಸರ್ಕಾರ ನಿರ್ಧರಿಸಿದೆ.
'ವಿತ್ ನೋ ಶೆಲ್ಟರ್, ದಿಸ್ ಮ್ಯಾನ್  ಲಿವ್ಸ್ ಆನ್ ಎ ಮ್ಯಾಂಗೋ ಟ್ರೀ' ಎಂಬ ಶೀರ್ಷಿಕೆಯಡಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ವರದಿ ಪ್ರಕಟವಾದ ನಂತರ,  ಬುಡಕಟ್ಟು ಅಭಿವೃದ್ಧಿ ಮತ್ತು ಪಂಚಾಯತ್ ಅಧಿಕಾರಿಗಳು ಮಲನಗೆರೆ ಬುಡಕಟ್ಟು ಕಾಲೋನಿಗೆ ಭೇಟಿ ನೀಡಿ ಪರಿಶೀಲನೆ ನೀಡಿದರು. 
ಗಜ್ಜ ಸೇರಿದಂತೆ 26 ಕುಟುಂಬಗಳಿಗೆ ಸರ್ಕಾರ ಬುಡಕಟ್ಟು ಹಕ್ಕುಗಳ ಕಾಯಿದೆ ಅಡಿಯಲ್ಲಿ 28 ಗುಂಟೆ ಭೂಮಿಯನ್ನು ನೀಡಿದೆ. ಇದರಲ್ಲಿ ಮೂರು ಜೇನು ಕುರುಬ ಕುಟುಂಬಗಳು ಗುಡಿಸಲು ನಿರ್ಮಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ ಎಂದು  ಉಪ ಆಯುಕ್ತ ಡಿ. ರಣ್ ದೀಪ್ ಹೇಳಿದ್ದಾರೆ.
ಹೀಗಾಗಿ ಈ ಎಲ್ಲಾ 26 ಕುಟುಂಬಗಳಿಗೂ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಶೀಘ್ರವೇ ಮನೆ ನಿರ್ಮಿಸಿಕೊಡಲಾಗುವುದು ಎಂದು ಹೇಳಿದ್ದಾರೆ.
ತನಗೆ ಗುಡಿಸಲು ನಿರ್ಮಿಸಿಕೊಳ್ಳುವಷ್ಟು ಆರ್ಥಿಕ ಚೈತನ್ಯವಿಲ್ಲ ಎಂದು ಗಜ್ಜಾ ಹೇಳಿದ ಹಿನ್ನೆಲೆಯಲ್ಲಿ ಆತನಿಗೆ ಧನಸಹಾಯ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. 
ಅರಣ್ಯ ಇಲಾಖೆ ನೀಡಿರುವ ಭೂಮಿಯಲ್ಲಿ ಗಜ್ಜನ ಸಹೋದರರು ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ಸರ್ಕಾರ ಧನ ಸಹಾಯ ನೀಡಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಮಹಾಲಯ ಅಮಾವಾಸ್ಯೆಯಂದು ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!