ಸಂಜೀವ ಶೆಟ್ಟಿ ಮತ್ತು ರತ್ನ ಶೆಟ್ಟಿ 
ರಾಜ್ಯ

ಉಡುಪಿ: ಮತ್ಸ್ಯಗಂಧ ರೈಲಿನಲ್ಲಿ ದಂಪತಿಗೆ ಮತ್ತುಬರಿಸಿ ದರೋಡೆ

ಕಾರ್ಕಳ ಮೂಲದ ವೃದ್ಧ ದಂಪತಿಗೆ ಮತ್ತು ಬರಿಸಿ ಅವರ ಬಳಿಯಿದ್ದ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿರುವ ಘಟನೆ ಮತ್ಸ್ಯ ಗಂಧ ರೈಲಿನಲ್ಲಿ ...

ಉಡುಪಿ: ಕಾರ್ಕಳ ಮೂಲದ ವೃದ್ಧ ದಂಪತಿಗೆ ಮತ್ತು ಬರಿಸಿ ಅವರ ಬಳಿಯಿದ್ದ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿರುವ ಘಟನೆ ಮತ್ಸ್ಯ ಗಂಧ ರೈಲಿನಲ್ಲಿ ನಡೆದಿದೆ. 
ಭಾನುವಾರ ಬೆಳಗ್ಗೆ ಮತ್ಸ್ಯಗಂಧ ರೈಲಿನ ಸ್ಲೀಪರ್ ಕೋಚ್ ಸಂಜೀವ ಶೆಟ್ಟಿ ಮತ್ತು ರತ್ನ ಶೆಟ್ಟಿ ಎಂಬುವರನ್ನು ದರೋಡೆ ಮಾಡಲಾಗಿದೆ.
ಆಗಸ್ಟ್ 5ರ ಶನಿವಾರ 3.50ಕ್ಕೆ ಥಾಣೆಯಿಂದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. 
ರೈಲಿನಲ್ಲಿದ್ದ ಅಪರಿಚಿತ ವ್ಯಕ್ತಿಗಳು ಸಂಜೀವ ಶೆಟ್ಟಿ ಮತ್ತು ರತ್ನಾ ದಂಪತಿಗೆ ಮತ್ತು ಬರಿಸಿ ಬಳಿಕ ಅವರ ಬಳಿಯಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಅದೇ ರೈಲಿನಲ್ಲಿ ಸಂಜೀವ ಶೆಟ್ಟಿ ಅವರ ಸಂಬಂಧಿಕರಾದ ಗಣೇಶ್ ಶೆಟ್ಟಿ ಮತ್ತು ಹರೀಶ್ ಶೆಟ್ಟಿ ಕೂಡ ಬೇರೊಂದು ಕೋಟ್ ಲ್ಲಿದ್ದರು. ಬೆಳಗ್ಗೆ 10.30ಕ್ಕೆ  ರೈಲು ಉಡುಪಿಗೆ ಆಗಮಿಸಿತು, ಈ ವೇಳೆ ದಂಪತಿ ದೀರ್ಘ ನಿದ್ರೆಯಲ್ಲಿದ್ದರು, ಸಂಬಂಧಿಕರು ಎಬ್ಬಿಸಲು ಬಂದಾಗ ಅನುಮಾನ ಗೊಂಡು ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ, ಸುಮಾರು 4 ಲಕ್ಷ ರು. ಮೌಲ್ಯದ ಹಣ ಚಿನ್ನಾಭರಣ ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?