ರಾಜ್ಯ

ಬೆಂಗಳೂರು: ಮಣಿಪುರ ಮೂಲದ ಹೊಟೇಲ್ ವೈಟರ್ ಮೇಲೆ ಹಲ್ಲೆ, ಆರೋಪ ನಿರಾಕರಿಸಿದ ವ್ಯವಸ್ಥಾಪಕರು

Sumana Upadhyaya
ಬೆಂಗಳೂರು: ಜಯನಗರದ ಹೊಟೇಲ್ ಎಂಪೈರ್ ನಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಮಣಿಪುರ ಮೂಲದ 35 ವರ್ಷ ವ್ಯಕ್ತಿಯ ಮೇಲೆ ಅದೇ ಹೊಟೇಲ್ ನ ಮ್ಯಾನೇಜರ್ ಮತ್ತು ಸಿಬ್ಬಂದಿ ಕ್ರಿಕೆಟ್ ಸ್ಟಂಪ್ ನಲ್ಲಿ ಹಲ್ಲೆ ಮಾಡಿದ ಘಟನೆ ನಡೆದಿದೆ.
ಹಲ್ಲೆಗೀಡಾದ ವ್ಯಕ್ತಿ ಎಸ್.ಪಾಕಾನ್ಮುಂಗ್ ಸದ್ಯ ಹೊಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ತೋಳು, ಕಾಲು ಮತ್ತು ಮುಖಕ್ಕೆ ಗಾಯಗಳಾಗಿವೆ. 
ಘಟನೆ ಸಂಬಂಧ ಈಶಾನ್ಯ ರಾಜ್ಯದ ನಗರದಲ್ಲಿ ವಾಸಿಸುತ್ತಿರುವ 8 ಮಂದಿ ಹೊಟೇಲ್ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.
ವ್ಯವಸ್ಥಾಪಕರನ್ನು ಪ್ರಶ್ನಿಸಿದ್ದಕ್ಕೆಲ ಪಾಕಾನ್ಮುಂಗ್ ವಿರುದ್ಧ ಕೇಸು ದಾಖಲಿಸಲಾಯಿತು ಎಂದು ಆತನನ್ನು ಆಸ್ಪತ್ರೆಗೆ ದಾಖಲಿಸಿದವರು ಆರೋಪಿಸಿದ್ದಾರೆ. ಸಿಗರೇಟು ಸೇದಿದ್ದಕ್ಕೆ ದಂಡ ಹಾಕಿದ್ದೇಕೆ ಎಂದು ಪಾಕಾನ್ಮುಂಗ್ ಮ್ಯಾನೇಜರ್ ನ್ನು ಪ್ರಶ್ನಿಸಿದ್ದ. ಅಷ್ಟಕ್ಕೇ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ. ಆದರೆ ಪಾಕಾನ್ಮುಂಗ್ ಮೇಲೆ ಆತನ ಸ್ನೇಹಿತರು ಮತ್ತು ಹೊಟೇಲ್ ನ ಒಬ್ಬ ಸಿಬ್ಬಂದಿ ಹಲ್ಲೆ ನಡೆಸಿದರು ಎಂದು ಹೊಟೇಲ್ ನ ಪ್ರತಿನಿಧಿಗಳು ಹೇಳುತ್ತಾರೆ.
 ಅಲ್ಲದೆ ಹೊಟೇಲ್ ನ ಕಾರ್ಯಕಾರಿ ವ್ಯವಸ್ಥಾಪಕ ಲೋಕನಾಥ್ ಮೇಲೆ ಪಾಕಾನ್ಮುಂಗ್ ಹಲ್ಲೆ ನಡೆಸಿದ್ದಾನೆ ಎಂದು ಹೊಟೇಲ್ ನ ವ್ಯವಸ್ಥಾಪಕರು ಕೇಸು ದಾಖಲಿಸಿದ್ದಾರೆ.
SCROLL FOR NEXT