ರಮ್ಯ ಕ್ಯಾಂಟೀನ್ 
ರಾಜ್ಯ

ಮಾಜಿ ಸಂಸದೆ ರಮ್ಯ ಹೆಸರಲ್ಲಿ ಕ್ಯಾಂಟೀನ್ ತೆರೆದ ಮಂಡ್ಯದ ಅಭಿಮಾನಿ

ಮಾಜಿ ಸಂಸದೆ, ನಟಿ ರಮ್ಯ ಅಭಿಮಾನಿಯೊಬ್ಬರು ಮಂಡ್ಯದಲ್ಲಿ 'ರಮ್ಯಾ ಕ್ಯಾಂಟೀನ್' ಪ್ರಾರಂಭಿಸಿದ್ದಾರೆ.

ಮಂಡ್ಯ: ಮಾಜಿ ಸಂಸದೆ, ನಟಿ ರಮ್ಯ ಅಭಿಮಾನಿಯೊಬ್ಬರು ಮಂಡ್ಯದಲ್ಲಿ 'ರಮ್ಯಾ ಕ್ಯಾಂಟೀನ್' ಪ್ರಾರಂಭಿಸಿದ್ದಾರೆ.
ಮಂಡ್ಯದ ರಘು, ರಮ್ಯ ಅವರ ಕಟ್ಟಾ ಅಭಿಮಾನಿಯಾಗಿದ್ದು ಕಳೆದ ಹಲವು ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಅವರು ರಮ ಅವರ ಹೆಸರಿನಲ್ಲಿ ಜನಸೇವೆ ಮಾಡಲು ನಿರ್ಧರಿಸಿ ಅವರ ಹೆಸರಿನಲ್ಲಿ ರಿಯಾಯಿತಿ ದರದಲ್ಲಿ ಊಟ, ಉಪಹಾರಗಳನ್ನು ಒದಗಿಸುವ ಕ್ಯಾಂಟೀನ್ ಪ್ರಾರಂಭಿಸಿದ್ದಾರೆ.
ಮಂಡ್ಯದ ಅಶೋಕ ನಗರದಲ್ಲಿರುವ ತ್ರಿವೇಣಿ ರಸ್ತೆಯಲ್ಲಿ ಈ ನೂತನ ಕ್ಯಾಂಟೀನ್ ಪ್ರಾರಂಭಿಸಿದ್ದು 10 ರೂ.ಗೆ ಇಡ್ಲಿ, ವಡೆ, ದೋಸೆ, ರವೆ ಇಡ್ಲಿ, ಸೇರಿದಂತೆ ತರಹೇವಾರಿ ತಿಂಡಿ,  ಊಟ ದೊರೆಯುತ್ತಿದೆ. ಅಲ್ಲದೆ ಪಾರ್ಸಲ್ ಸೌಲಭ್ಯವೂ ಇದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ  ಅವರು ಈ ನೂತನ ಕ್ಯಾಂಟೀನ್ ಗೆ ಇಂದು ಚಾಲನೆ ನೀಡಿದ್ದಾರೆ. 
ಇದರೊಡನೆ ರಾಜ್ಯದಲ್ಲಿ ಇದಾಗಲೇ ಪ್ರಾರಂಭವಾಗಿರುವ ಅಮ್ಮಾ ಕ್ಯಾಂಟೀನ್, ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್ ಸಾಲಿಗೆ ಇಒದೀಗ ನೂತನವಾಗಿ ರಮ್ಯಾ ಕ್ಯಾಂಟೀನ್ ಸೇರಿಕೊಂಡಿದೆ. ರಾಜ್ಯ ವಿಧಾನ ಸಭೆ ಚುನಾವಣೆ ಇನ್ನೇನು ಸನಿಹದಲ್ಲೇ ಬರುತ್ತಿರುವುದರಿಂದ ರಾಜ್ಯ ಕಾಂಗ್ರೆಸ್ ಗೆ ಇದರಿಂದ ಯಾವ ಬಗೆಯಲ್ಲಿ ಲಾಭ ಆಗಲಿದೆ, ಕಾದು ನೋದಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು