ರಾಜ್ಯ

ಕಲಬುರ್ಗಿ: ಭೀಮಾ ತೀರದ ಹಂತಕ ಚಂದಪ್ಪ ಹರಿಜನ ಸಹಚರರು ಸೇರಿ 9 ಮಂದಿ ಬಂಧನ

Raghavendra Adiga
ಕಲಬುರ್ಗಿ: ಕಲಬುರ್ಗಿ ಜಿಲ್ಲಾ ಪೋಲೀಸರು ಭೀಮಾ ತೀರದ ಹಂತಕ ಚಂದಪ್ಪ ಹರಿಜನನ ಸಹಚರರೂ ಸೇರಿದಂತೆ 9 ಜನರನ್ನು ಇಂದು ಬಂಧಿಸಿದ್ದಾರೆ. ಬಂಧಿತರಿಂದ  20 ನಾಡ ಪಿಸ್ತೂಲ್‌ ಹಾಗೂ 54 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
"ಬಂಧಿತರಲ್ಲಿ ಮಲ್ಲಿಕಾರ್ಜುನ ಮತ್ತು ಅರ್ಜುನ ಎನ್ನುವ ಇಬ್ಬರು ಚಂದಪ್ಪ ಹರಿಜನನ ಸಹಚರರಾಗಿದ್ದು ಭೀಮಾ ತೀರದ ಅಫಜಲಪುರದಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ" ಎಂದು ಐಜಿಪಿ ಅಲೋಕ ಕುಮಾರ್‌ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು "ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶಗಳಿಂದ ಅವರಿಗೆ ಅಕ್ರಮ ನಾಡ ಪಿಸ್ತೂಲುಗಳು ಪೂರೈಸ್ಕೆಯಾಗುತ್ತಿದೆ. ಮಧ್ಯಪ್ರದೇಶದಲ್ಲಿ ಈ ಅಕ್ರಮ ಪಿಸ್ತೂಲು ತಯಾರಿಕೆಯು ಗುಡಿ ಕೈಗಾರಿಕೆ ರೀತಿಯಲ್ಲಿ ನಡೆಯುತ್ತಿದ್ದು ಇನ್ನು ಅಲ್ಲಿಂದ ನಮ್ಮ ರಾಜ್ಯಕ್ಕೆ ಈ ಪಿಸ್ತೂಲು ಪೂರೈಕೆಯನ್ನು ತಡೆಯಲು ಕಲಬುರ್ಗಿ ಜಿಲ್ಲಾ ಪೊಲೀಸ್‌ ಅಧಿಕಾರಿಗಳಾದ ಎನ್‌.ಶಶಿಕುಮಾರ್‌ ನ್ ಏತೃತ್ವದಲ್ಲಿ ತಂದವನ್ನು ಅಲ್ಲಿಗೆ ಕಳಿಸಲಾಗುತ್ತದೆ" ಎಂದರು.
ಇದೇ ವೇಳೆ ಈ ಹಂತಕರ ಗ್ಯಾಂಗ್ ನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೋಲೀಸರ ತಂಡಕ್ಕೆ 1 ಲಕ್ಷ ರೂ. ಬಹುಮಾನ ವಿತರಿಸಲಾಯಿತು. ಕಲಬುರ್ಗಿಯ ಸಹಾಯಕ ಪೊಲೀಸ್‌ ಅಧಿಕಾರಿಗಳಾದ ಲೋಕೇಶ್‌ ಅವರ ಹೆಸರನ್ನು ಮುಖ್ಯಮಂತ್ರಿಗಳ ಪದಕ ಪುರಸ್ಕಾರಕ್ಕೆ ಶಿಫಾರಸ್ ಮಾಡಲಾಗುತ್ತದೆ ಎಂದು ಅಲೋಕ ಕುಮಾರ್ ಹೇಳಿದ್ದಾರೆ.
SCROLL FOR NEXT