ಶಾರ್ಪ್ ಶೂಟರ್ ಮುಂಡೇವಾಡಿ ಪ್ರಾರ್ಥನಾ ಸ್ಕೂಲ್ ನ ಮಾಜಿ ಸೆಕ್ಯೂರಿಟಿ ಗಾರ್ಡ್ 
ರಾಜ್ಯ

ಶಾರ್ಪ್ ಶೂಟರ್ ಮುಂಡೇವಾಡಿ ಪ್ರಾರ್ಥನಾ ಸ್ಕೂಲ್ ನ ಮಾಜಿ ಸೆಕ್ಯೂರಿಟಿ ಗಾರ್ಡ್

ಸಹೋದ್ಯೋಗಿ ಸುನೀಲ್ ಹೆಗ್ಗರಹಳ್ಳಿ ಹತ್ಯೆಗೆ ಸುಪಾರಿ ಕೊಟ್ಟಿದ್ದ ಪತ್ರಕರ್ತ ರವಿ ಬೆಳಗೆರೆ ಯನ್ನು ಶುಕ್ರವಾರ ಬಂಧಿಸಲಾಗಿದೆ.

ಬೆಂಗಳೂರು:  ಸಹೋದ್ಯೋಗಿ ಸುನೀಲ್ ಹೆಗ್ಗರಹಳ್ಳಿ ಹತ್ಯೆಗೆ ಸುಪಾರಿ ಕೊಟ್ಟಿದ್ದ  ಪತ್ರಕರ್ತ ರವಿ ಬೆಳಗೆರೆ ಯನ್ನು ಶುಕ್ರವಾರ ಬಂಧಿಸಲಾಗಿದೆ. ಹೀಗೆ ರವಿ ಬೆಳಗೆರೆ ಸುಪಾರಿ ಪಡೆದಿದ್ದ ಶಾರ್ಪ್ ಶೂಟರ್ ಶಶಿಧರ್ ಮುಂಡೇವಾಡಿ  ಈ ಹಿಂದೆ ಜೈಲು ಸೇರಿದ್ದು ಬೇಲ್ ಮೇಲೆ ಹೊರಬಂದಿದ್ದರೆಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಅವರು ಹೇಳುವಂತೆ ಹೆಗ್ಗರವಳ್ಳಿಯನ್ನು ಹತ್ಯೆ ಮಾಡುವ ಸಂಚು 2014ರಲ್ಲಿಯೇ ರೂಪ ಪಡೆದಿತ್ತು. ಮುಂಡೇವಾಡಿ, ರವಿ ಬೆಳಗೆರೆ ಮಾಲಿಕತ್ವದ ಪ್ರಾರ್ಥನಾ ಶಾಲೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿಯೂ, ಅವರ ಹಾಯ್ ಬೆಂಗಳೂರು ಪತ್ರಿಕೆಗೆ ಸಹಾಯಕರಾಗಿಯೂ ಕೆಲಸ ಮಾಡಿದ್ದರೆಂದು ಪೋಲೀಸರು ಹೇಳಿದ್ದಾರೆ
ಬೆಳಗಾವಿ ಹಾಗೂ ಬಾಗಲಕೋಟೆಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮುಂಡೇವಾಡಿ 2001ರಲ್ಲಿ ರವಿ ಬೆಳಗೆರೆ ಒಂದು ಪುಸ್ತಕ ಬರೆಯುವ ಸಮಯಕ್ಕೆ ಅವರ ಸಂಪರ್ಕಕ್ಕೆ ಬಂದಿದ್ದನು.ಬೆಳಗೆರೆ ಅವನಿಗೆ ಕೆಲವು ಪ್ರಕರಣಗಳಲ್ಲಿ ಬೇಲ್ ಕೊಡಿಸಿದ್ದೂ ಅಲ್ಲದೆ   ಕಾನೂನು ವಿಚಾರದಲ್ಲಿ ನೆರವಾಗಿದ್ದರು. ಅದಕ್ಕಾಗಿ ಇಬ್ಬರೂ ಬಹು ಬೇಗ ಆತ್ಮೀಯರಾದರು.
.2001ರಲ್ಲಿ ಪ್ರಾರ್ಥನಾ ಶಾಲೆಯ ಸೆಕ್ಯೂರಿಟಿ ಗಾರ್ಡ್ ಆಗಿ ಸೇರಿದ್ದ ಮುಂಡೇವಾಡಿ ಪ್ರತಿ ದಿನವೂ  ಹಾಯ್ ಬೆಂಗಳೂರು ಪತ್ರಿಕಾ ಕಛೇರಿಗೆ ಬರುತ್ತಿದ್ದನು. ಆಗೆಲ್ಲ ಹೆಗ್ಗರವಳ್ಳಿ ಅವರನ್ನು ಗಮನಿಸುತ್ತಿದ್ದನು. ಹೆಗ್ಗರವಳ್ಳಿಗೆ ಮುಂಡೇವಾಡಿಯ ಅಪರಾಧಗಳ ಹಿನ್ನೆಲೆ ತಿಳಿದಿತ್ತು. ಇದಾಗಿ ಒಂದು ವರ್ಷದ ಬಳಿಕ ಮುಂಡೇವಾಡಿ ಕೆಲಸ ತೊರೆದು ತನ್ನ ಊರಿಗೆ ಮರಳಿದ್ದನು.
"2014ರಲ್ಲಿ ರವಿ, ಹೆಗ್ಗರವಳ್ಳಿಯನ್ನು ಕೆಲಸದಿಂದ ಹೊರಹಾಕಲು ಮುಂದಾದಾಗ ಬೆಳಗೆರೆ  ಶಶಿಯನ್ನು ಸಂಪರ್ಕಿಸಿದ್ದರು. ಆಗ ಮತ್ತೆ ಬೆಂಗಳೂರಿಗೆ ಬಂದ ಶಶಿ, ಹೆಗ್ಗರವಳ್ಳಿಯ ಕುರಿತು ಮಾಹಿತಿ  ಕಲೆ ಹಾಕಿದ್ದನು" ಎಂದು ಹಿರಿಯ ಪೋಲೀಸ್ ಅಧಿಕಾರಿ ಹೇಳಿದ್ದಾರೆ.
ಖಾಲಿ ಹಾಳೆ ಹಾಗೂ ಸಿಗರೇಟ್ ಗಳನ್ನು ಕೇಳಿದ  ಬೆಳಗೆರೆ
ಶನಿವಾರದ ವಿಚಾರಣೆ ವೇಳೆ ಬೆಳಗೆರೆ ತನ್ನ ಹೇಳಿಕೆಯನ್ನು ಬರಹದಲ್ಲಿ ನೀಡುವ ಸಲುವಾಗಿ ಸಿಸಿಬಿ ಪೋಲೀಸರಿಗೆ ಖಾಲಿ ಹಾಳೆಗಳನ್ನು ನೀಡುವಂತೆ ಕೇಳಿದ್ದಾರೆ. ಅಲ್ಲದೆ ರವಿ ಸಿಗರೇಟ್ ಗಾಗಿ ಬೇಡಿಕೆ ಇಟ್ಟಿದ್ದರು. ಆದರೆ ಪೋಲೀಸ್ ಅಸಿಸ್ಟೆಂಟ್ ಕಮಿಷನರ್ ಇದಕ್ಕೆ ಅವಕಾಶ ನೀಡಲಿಲ್ಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್