ಬೆಂಗಳೂರು: ಅಕ್ಕನಿಗೆ ಕ್ಯಾನ್ಸರ್ ಎಂದು ತಿಳಿದು ಖಿನ್ನತೆಗೊಳಗಾದ ವ್ಯಕ್ತಿ ಆತ್ಮಹತ್ಯೆಗೆ ಶರಣು 
ರಾಜ್ಯ

ಬೆಂಗಳೂರು: ಅಕ್ಕನಿಗೆ ಕ್ಯಾನ್ಸರ್ ಎಂದು ತಿಳಿದು ಖಿನ್ನತೆಗೊಳಗಾದ ವ್ಯಕ್ತಿ ಆತ್ಮಹತ್ಯೆಗೆ ಶರಣು

ಕ್ಯಾನ್ಸರ್ ಕಾರಣದಿಂದಾಗಿ ತನ್ನ ಅಕ್ಕ ಸಾಯುತ್ತಾಳೆ ಎಂದು ತಿಳಿದು ಖಿನ್ನತೆಗೊಳಗಾದ 32 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೆಂಗಳೂರು: ಕ್ಯಾನ್ಸರ್ ಕಾರಣದಿಂದಾಗಿ ತನ್ನ ಅಕ್ಕ ಸಾಯುತ್ತಾಳೆ ಎಂದು ತಿಳಿದು ಖಿನ್ನತೆಗೊಳಗಾದ 32 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. 
ಮೃತ ವ್ಯಕ್ತಿ ವಿಜಯನಗರ ನಿವಾಸಿ ಹರ್ಷ ಶೆಟ್ಟಿ ಎನ್ನಲಾಗಿದ್ದು ಮತ್ತು ಕಾಡುಬೀಸನಹಳ್ಳಿಯ ಹಣಕಾಸು ಸೇವಾ ಸಂಸ್ಥೆ ವೆಲ್ಸ್ ಫಾರ್ಗೋ ದಲ್ಲಿ ತಾಂತ್ರಿಕ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದನು.
ಖಾಸಗಿ ಆಸ್ಪತ್ರೆಯಲ್ಲಿ ತನ್ನ ಸಹೋದರಿ ಆಶಾ ಶೆಟ್ಟಿ ಅವರನ್ನು ಭೇಟಿ ಮಾಡಲು ಭಾನುವಾರ ಮಣಿಪಾಲಕ್ಕೆ ತೆರಳಿದ್ದ ಹರ್ಷ ಆಕೆಯ ಕ್ಯಾನ್ಸರ್ ಕೊನೆಯ ಹಂತಕ್ಕೆ ತಲುಪಿದೆ ಎಂದು ವೈದ್ಯರಿಂದ ಮಾಹಿತಿ ಪಡೆದಿದ್ದನು, ಆಶಾ ಅವರು ‍ ಚೇತರಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ ಎಂದು ವೈದ್ಯರು ಹೇಳಿದಾಗ ಆತನಿಗೆ ಅತೀವ ದುಃಖವಾಗಿತ್ತು. ಮರಳಿ ಬೆಂಗಳೂರಿಗೆ ಬಂದ ಹರ್ಷ ಅದೇ ವಿಚಾರವನ್ನು ತನ್ನ ಪತ್ನಿ ರಮ್ಯಾ ಗೆ ಸಹ ತಿಳಿಸಿದ್ದನು. ಬುಧವಾರ ದಿನ ರಾತ್ರಿ ರಮ್ಯಾಗೆ ಹರ್ಷನ ಕೋಣೆಯಿಂದ ಸದ್ದೊಂದು ಕೇಳಿ ಬಂದಿದ್ದು ಆಕೆ ಪರಿಶೀಲಿಸಿದಾಗ ಹರ್ಷ ನೇಣು ಬಿಗಿದುಕೊಂಡಿದ್ದದ್ದು ತಿಳಿದಿದೆ. ತಕ್ಷಣ ಅಂಬ್ಯುಲೆನ್ಸ್ ಗೆ ಕರೆ ಮಾಡಿದ ರಮ್ಯಾ ಅವನನ್ನು ಕೆಸಿ ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾಳೆ. ಆದರೆ ಅಲ್ಲಿಗೆ ತಲುಪುವ ವೇಳೆಗಾಗಲೇ ಹರ್ಷ ಮೃತನಾಗಿದ್ದನೆಂದು ಪೋಲೀಸರು ಹೇಳಿದರು.
ಹರ್ಷ ತಂದೆ 2002ರಲ್ಲಿ, ತಾಯಿ 2005ರಲ್ಲಿ ಮೃತರಾಗಿದ್ದು ಅದರ ನಂತರ ಅವನಿಗೆ ಹಿರಿಯ ಅಕ್ಕನೇ ಎಲ್ಲವೂ ಆಗಿದ್ದರು. ಇದೀಗ ಆಕೆಯೂ ಕ್ಯಾನ್ಸರ್ ನಿಂದ ಸಾಯುವವಳಿದ್ದಾಳೆ ಎಂದು ತಿಳಿದ ಅವನು ಖಿನ್ನತೆಗೆ ಒಳಗಾಗಿದನು ಎಂದು ಪೋಲೀಸರು ಮಾಹಿತಿ ನೀಡಿದರು. ಅಗಲಿದ ಹರ್ಷ ಗೆ ಎರಡು ವರ್ಷದ  ಮಗಳಿದ್ದಾಳೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ

ಪಂದ್ಯ ಮುಗಿಸಿ ಮನೆಗೆ ಮರಳುವಾಗ ಭೀಕರ ಅಪಘಾತ, 4 ಕ್ರಿಕೆಟಿಗರ ದಾರುಣ ಸಾವು!